ಬೃಹತ್ ರಸ್ತೆ ಹೊಂಡಕ್ಕೆ ಶಾಂತಿ ಪಾಲನಾ ಅಧಿಕಾರಿ ಬಲಿ

Update: 2016-12-06 06:51 GMT

ಟೆಕ್ಸಾಸ್, ಡಿ.6: ಟೆಕ್ಸಾಸ್ ನಗರದ ರಸ್ತೆಯೊಂದರಲ್ಲಿ ಕಂಡುಬಂದ ದೈತ್ಯ ಕಂದಕವೊಂದು ಎರಡು ಕಾರುಗಳನ್ನು ರವಿವಾರ ರಾತ್ರಿ ಸ್ವಾಹಾ ಮಾಡಿದ್ದು, ಈ ದುರ್ಘಟನೆಯಲ್ಲಿ ಒಬ ಮಹಿಳಾ ಅಧಿಕಾರಿ ಮೃತಪಟ್ಟರೆ ಇನೊಬ್ಬ ಗಾಯಗೊಂಡಿದ್ದಾರೆ.

ಮೃತ ಅಧಿಕಾರಿಯನ್ನು ಡೋರಾ ಲಿಂಡಾ (ಸೋಲಿಸ್) ನಿಶಿಹರ ಎಂದು ಗುರುತಿಸಲಾಗಿದೆ. ಇನ್ನೊಂದು ವಾಹನದಲ್ಲಿದ್ದ ಗುರುತು ಪತ್ತೆಯಾಗದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ರಿಸರ್ವ್ ಡೆಪ್ಯುಟಿ ಶೆರಿಫ್ ಎಂದರೆ ಪೊಲೀಸ್ ಇಲಾಖೆ ಜೊತೆ ಜನತೆಗೆ ಉತ್ತಮ ಸೇವೆ ನೀಡಲು ಸಹಕರಿಸುವ ಸ್ವಯಂ ಸೇವಕರ ಸಂಸ್ಥೆ. ರಿಸರ್ವ್ ಡೆಪ್ಯುಟಿ ಶೆರಿಫ್ ಎಂದರೆ ಶಾಂತಿ ಪಾಲನಾ ಅಧಿಕಾರಿ. ಆತ / ಆಕೆಗೆ ಕ್ಯಾಲಿಫೋರ್ನಿಯಾ ಕಾನೂನು ಪ್ರಕಾರ ಕರ್ತವ್ಯದಲ್ಲಿರುವಾಗ ಕೆಲವು ನಿರ್ದಿಷ್ಟ ಅಧಿಕಾರಗಳು ಇರುತ್ತವೆ. 

ನೈಋತ್ಯ ಸ್ಯಾನ್ ಆಂಟೋನಿಯೋದಲ್ಲಿರುವ ದ್ವಿಪಥ ರಸ್ತೆಯೊದರಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ 54 ಇಂಚು ಅಗಲದ ಪೈಪೊಂದು ತುಂಡಾಗಿ ಬಿದ್ದಿತ್ತು ಹಾಗೂ 10ರಿಂದ 12 ಅಡಿ ಆಳದ ಕಂದಕವೊಂದು ನಿರ್ಮಾಣಗೊಂಡಿತು. ಇಡೀ ರಸ್ತೆಯ ಅಗಲದಷ್ಟು ಈ ಕಂದಕ ಹರಡಿಕೊಂಡಿತ್ತು.

ಈ ಬೃಹತ್ ಪೈಪು ಎರಡು ನಿರ್ಮಾಣ ಯೋಜನೆಗಳ ಸನಿಹವಿದ್ದು, ಒಂದು ಕಟ್ಟಡ ನಿರ್ಮಾಣ ಪೂರ್ತಿಗೊಂಡಿದ್ದರೆ ಇನ್ನೊಂದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಪೈಪ್ ಒಡೆಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಕಂದಕದ ತುಂಬೆಲ್ಲಾ ತ್ಯಾಜ್ಯ ನೀರು ತುಂಬಿತ್ತು. ಮೃತ ಪಟ್ಟ ನಿಶಿಹರ ಅವರ ವಾಹನ ಈ ತ್ಯಾಜ್ಯ ನೀರಿನಲ್ಲಿ ತಲೆಕೆಳಗಾಗಿ ವಸ್ತುಶಃ ಮುಳುಗಿ ಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News