ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್‌ಬಾಲ್ ಕೋರ್ಟ್ ಉದ್ಘಾಟನೆ

Update: 2016-12-06 07:15 GMT

ಮಂಗಳೂರು, ಡಿ.6: ನಗರದ ಅಲೋಶಿಯಸ್ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ಗುಣಮಟ್ಟದ ನೂತನ ಬಾಸ್ಕೆಟ್‌ಬಾಲ್ ಕೋರ್ಟ್ ಸೋಮವಾರ ಉದ್ಘಾಟನೆಗೊಂಡಿತು.

ನೂತನ ಕ್ರೀಡಾಂಗಣವನ್ನು ಹಿರಿಯ ಧರ್ಮಗುರು, ಕಾಲೇಜಿನ ಮಾಜಿ ಹಣಕಾಸು ಅಧಿಕಾರಿ ಫಾ.ವಾಲ್ಟರ್ ಅಂದ್ರಾದೆ ಉದ್ಘಾಟಿಸಿದರು.

ರೆಕ್ಟರ್ ಫಾ.ಡಿಯೋನಿಸಿಯಸ್ ವಾಝ್ ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಅವರು, ಬಾಸ್ಕೆಟ್‌ಬಾಲ್ ಆಟವು ದೈಹಿಕ ಸಾಮರ್ಥ್ಯದೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಜೊತೆಗೆ ಸಿಬ್ಬಂದಿ ಕೂಡಾ ಈ ಕ್ರೀಡಾಂಗಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವ ಸ್ವಾಗತ ಭಾಷಣ ಮಾಡಿದರು. ಕ್ಯಾಂಪಸ್ ಮಾಜಿ ಅಧಿಕಾರಿ ಫಾ.ಫ್ರಾನ್ಸಿಸ್ ಅಲ್ಮೇಡಾ, ಕ್ಯಾಂಪಸ್ ಅಧಿಕಾರಿ ಪ್ರವೀಣ್ ಮಾರ್ಟಿಸ್, ಕಾಲೇಜಿನ ಹಣಕಾಸು ಅಧಿಕಾರಿ ಫಾ.ಪ್ರದೀಪ್ ಸಿಕ್ವೇರ, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷೆ ಮಿಶೆಲ್ ಡಿಸೋಜ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡೋನೆಟ್ ಡಿಸೋಜ ವಂದಿಸಿದರು. ಬಳಿಕ ಸೈಂಟ್ ಅಲೋಶಿಯಸ್ ಕಾಲೇಜಿನ ಬಾಸ್ಕೆಟ್‌ಬಾಲ್ ತಂಡ, ಕಾಲೇಜಿನ(ಆಶಾ ಕಿರಣ್) ಬಾಸ್ಕೆಟ್ ಬಾಲ್ ತಂಡ ಹಾಗೂ ಪದವಿಪೂರ್ವ ಕಾಲೇಜಿನ ಬಾಸ್ಕೆಟ್‌ಬಾಲ್ ತಂಡಗಳ ನಡುವೆ ಪಂದ್ಯಾಟ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News