ಐಪಿಟಿಎಲ್‌ಗೆ ತಟ್ಟಿದ ನೋಟು ಅಮಾನ್ಯ ಬಿಸಿ

Update: 2016-12-06 07:38 GMT

ಹೊಸದಿಲ್ಲಿ, ಡಿ.6: ದೇಶದಲ್ಲಿ ಗರಿಷ್ಠ ಮುಖಬೆಲೆಯ ಕರೆನ್ಸಿ ನೋಟುಗಳ ಅಮಾನ್ಯದ ಬಿಸಿ ಮೂರನೆ ಆವೃತ್ತಿಯ ಇಂಟರ್‌ನ್ಯಾಶನಲ್ ಪ್ರೀಮಿಯರ್ ಟೆನಿಸ್ ಲೀಗ್(ಐಪಿಟಿಎಲ್)ಮೇಲೂ ಪರಿಣಾಮಬೀರಿದೆ.

ಗರಿಷ್ಠ ನೋಟು ಅಮಾನ್ಯಗೊಳಿಸಿರುವ ಕಾರಣದಿಂದ ಈ ವರ್ಷ ವಿಶ್ವದ ಇಬ್ಬರು ಸೂಪರ್‌ಸ್ಟಾರ್‌ಗಳಾದ ರೋಜರ್ ಫೆಡರರ್ ಹಾಗೂ ಸೆರೆನಾ ವಿಲಿಯಮ್ಸನ್ ಲೀಗ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಮಂಗಳವಾರ ಘೋಷಿಸಲಾಗಿದೆ.

 ಈ ಬೆಳವಣಿಗೆಯು ಐಪಿಟಿಎಲ್‌ಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಕಳೆದ ಬಾರಿ ಐಪಿಟಿಎಲ್‌ನಲ್ಲಿ ತಾರಾಕರ್ಷಣೆಯಾಗಿದ್ದರು.

ಫೆಡರರ್ ಇಂಡಿಯನ್ ಏಸೆಸ್ ತಂಡದಲ್ಲಿ ಸಾನಿಯಾ ಮಿರ್ಝಾರೊಂದಿಗೆ ಆಡಿದ್ದರು. ಕಳೆದ ಬಾರಿ ಸಿಂಗಾಪುರ ಸ್ಲಾಮ್ಮರ್ಸ್‌ ತಂಡವನ್ನು ಪ್ರತಿನಿಧಿಸಿದ್ದ 35ರ ಪ್ರಾಯದ ಸೆರೆನಾ ವಿಲಿಯಮ್ಸ್ ಈ ವರ್ಷ ಯಾವುದೇ ತಂಡದಲ್ಲಿ ಆಡುತ್ತಿಲ್ಲ.

‘‘ನಮಗೆ ಈ ವರ್ಷ ಹೊಸ ಸವಾಲು ಎದುರಾಗಿದೆ. ಭಾರತದ ಈಗಿನ ಆರ್ಥಿಕ ಪರಿಸ್ಥಿತಿ, ಹಣಕಾಸು ಹೂಡಿಕೆಯಲ್ಲಿನ ಅನಿಶ್ಚಿತತೆಯ ಬಗ್ಗೆ ರೋಜರ್ ಹಾಗೂ ಸೆರೆನಾಗೆ ವಿವರಣೆ ನೀಡಿದ್ದೇನೆ. ಇಬ್ಬರು ಕೂಡ ಐಪಿಟಿಎಲ್‌ನ ಮೊದಲೆರಡು ಆವೃತ್ತಿಗಳಲ್ಲಿ ಬೆಂಬಲ ನೀಡಿದ್ದರು. ಮುಂದಿನ ವರ್ಷಗಳಲ್ಲಿ ಅವರನ್ನು ಮರಳಿ ಕರೆ ತರುವ ಬಗ್ಗೆ ಪ್ರಯತ್ನಿಸಲಾಗುತ್ತದೆ’’ ಎಂದು ಐಪಿಟಿಎಲ್‌ನ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಮಹೇಶ್ ಭೂಪತಿ ಹೇಳಿದ್ದಾರೆ.

ಮೂರನೆ ಆವೃತ್ತಿಯ ಐಪಿಟಿಎಲ್ ಡಿ.2 ರಿಂದ ಜಪಾನ್‌ನಲ್ಲಿ ಆರಂಭವಾಗಿದೆ. ಮೂರನೆ ಹಾಗೂ ಅಂತಿಮ ಚರಣದ ಟೂರ್ನಿಯು ಡಿ.11 ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News