ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ವಾರ್ಷಿಕೋತ್ಸವ

Update: 2016-12-06 11:46 GMT

ಸುಳ್ಯ, ಡಿ. 6: ಸುಳ್ಯದ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕ  ಕಾರ್ಯಕ್ರಮ ನಡೆಯಿತು.

ಅತಿಥಿಯಾಗಿದ್ದ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ನಿವೃತ್ತರಾದಾಗ ಬದಲಿ ಹೊಸದಾಗಿ ನೇಮಕ ನಡೆಯುತ್ತಿಲ್ಲ. ಹಾಗಿದ್ದೂ ಪೋಷಕರ ಪ್ರೋತ್ಸಾಹದಿಂದ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಅವರ ಸಾಧನೆಯನ್ನು ತೋರಿದಾಗ ಮಾತ್ರ ಶಾಲೆಗೆ ಹೆಸರು ಬರುತ್ತದೆ ಎಂದವರು ಹೇಳಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕುಯ್ಹಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಭಾಷೆ ಕೇವಲ ಮಾಧ್ಯಮ ಮಾತ್ರ. ಅದು ಯಾವುದೇ ಇರಲಿ. ಅದರಲ್ಲಿ ಹಿಡಿತ ಇದ್ದರೆ ಮಾತ್ರ ಸಾಧನೆ ಮಾಡಬಹುದು. ವಿದ್ಯೆ ದೇಶಕ್ಕೆ ಬುನಾದಿಯಾಗಿದ್ದು, ದೇವಭಕ್ತಿ, ದೇಶಭಕ್ತಿ, ಹಿರಿಯರ ಭಕ್ತಿ, ಗುರುಭಕ್ತಿ ಹಾಗೂ ಕಠಿಣ ಶ್ರಮ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಹಾಗೆ ಮಾಡಿದರೆ ದೇಶಕ್ಕೆ ಹೆಸರು ತರಬಹುದು ಎಂದವರು ಹೇಳಿದರು

ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ,ನಗರ ಪಂಚಾಯತ್ ಸದಸ್ಯೆ ಸುನಿತಾ ಮೊಂತೆರೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅರುಳಪ್ಪನ್ ,  ಪರಿವಾರಕಾನ ಮದರ್ ಥೆರೆಸಾ ಚರ್ಚ್‌ನ ಫಾದರ್ ಮ್ಯಾಥ್ಯು, ಮುಖ್ಯೋಪಾಧ್ಯಾಯಿನಿ ಲೂಸಿ ಪಿ ಡಿ’ಸೋಜ, ಸೈಂಟ್ ಜೋಸೆಫ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮಾ, ಶಾಲಾ ಪೋಷಕರ ಸಂಘದ ಅಧ್ಯಕ್ಷ ನಾರಾಯಣ ಜಟ್ಟಿಪಳ್ಳ, ಶಾಲಾ ನಾಯಕ ಎಚ್.ಜೆ.ಪುನೀತ್ ಉಪಸ್ಥಿತರಿದ್ದರು.

ಬುಲ್‌ಬುಲ್‌ನಲ್ಲಿ ಸಾಧನೆ ಮಾಡಿದ ಶಿಕ್ಷಕಿ ಜಾನೆಟ್ ಸೆವರಿನ್ ಲೋಬೋರವರನ್ನು ಸನ್ಮಾನಿಸಲಾಯಿತು.

ಶಾಲಾ ಸಂಚಾಲಕ ಫಾದರ್ ವಿನ್ಸೆಂಟ್ ಡಿ’ಸೋಜ ಸ್ವಾಗತಿಸಿದರು, ಶಿಕ್ಷಕ ಉಮೇಶ್ ವಂದಿಸಿದರು.

ಶಿಕ್ಷಕಿ ವಲ್ಸ ಮತ್ತು ವಿದ್ಯಾಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News