ಅಮೃತ ಯೋಜನೆಯಲ್ಲಿ ಒಳಚರಂಡಿ ವ್ಯವಸ್ಥೆ: ಶಾಸಕ ಲೋಬೊ

Update: 2016-12-06 12:24 GMT

ಮಂಗಳೂರು, ಡಿ.6: ನಗರದ ಬೃಹತ್ ತೋಡುಗಳಲ್ಲಿ ಒಳಚರಂಡಿಯ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರಲ್ಲಿ ತೊಂದರೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ರಾಜ್ಯ ಸರಕಾರದ ಅಮೃತ ಯೋಜನೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ನಗರದ ಜಪ್ಪುಕುಡ್ಪಾಡಿ ದೋಟ ಬಳಿ 45 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ತಡೆಗೋಡೆ ನಿರ್ಮಾಣ, 40 ಲಕ್ಷ ರೂ. ವೆಚ್ಚದಲ್ಲಿ ಉರ್ವ ಹೊಗೈಬೈಲ್ ಬಳಿ ಹರಿಯುವ ತೋಡಿಗೆ ತಡೆಗೋಡೆ ನಿರ್ಮಾಣ, 30 ಲಕ್ಷ ರೂ. ಅಳಪೆ ಉತ್ತರ ವಾರ್ಡ್ ಪರಂಬೋಕು ತೋಡಿನ ತಡೆಗೋಡೆ ನಿರ್ಮಾಣ, 30 ಲಕ್ಷ ರೂ. ವೆಚ್ಚದಲ್ಲಿ ಕುಲಶೇಖರ ಕುಚ್ಚಿಕಾಡಿನಿಂದ ಮಹಾಕಾಳಿಯವರೆಗೆ ಹರಿಯುವ ತೋಡಿನ ದಂಡೆ ಸಂರಕ್ಷಣೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭ ಕಾರ್ಪೊರೇಟರ್‌ಗಳಾದ ಶೈಲಜಾ, ರಾಧಾಕೃಷ್ಣ, ಜುಬೇದಾ ಅಝೀಝ್, ಪ್ರಕಾಶ್ ಅಳಪೆ ಹಾಗೂ ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕೆನರಾ ಬ್ಯಾಂಕ್‌ನ ಮಾಜಿ ನಿರ್ದೇಶಕ ಉಮೇಶ್ಚಂದ್ರ, ಮುಡಾ ಮಾಜಿ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ, ಮಾಜಿ ಮೇಯರ್ ಅಬ್ದುಲ್ ಅಝೀಝ್, ಮುಖಂಡರಾದ ಕಮಲಾಕ್ಷ ಕುಂದರ್, ವಿಜಯಲಕ್ಷ್ಮಿ, ಮುಡಾ ಸದಸ್ಯೆ ಶೋಭಾ ಕೇಶವ, ಚೇತನ ಉರ್ವಾ, ದಿಲೀಪ್, ಚಿತ್ರನಟ ನವೀನ್ ಡಿ ಪಡೀಲ್, ಅಶೋಕ ಕುಡ್ಪಾಡಿ, ಮುಹಮ್ಮದ್ ನವಾಝ್, ಆಲ್ವೀನ್ ಪಾಯಸ್, ಹೆನ್ರಿ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News