ಮಾನವೀಯ ಗುಣ ಬೆಳೆಸಿಕೊಳ್ಳಲು ಜಮಾಅತೆ ಇಸ್ಲಾಮೀ ಹಿಂದ್ ಕರೆ

Update: 2016-12-06 12:35 GMT

ಮಂಗಳೂರು, ಡಿ. 6: ಜಮಾಅತೆ ಇಸ್ಲಾಮೀ ಹಿಂದ್ ಬೋಳಾರ ವರ್ತುಲದ ವತಿಯಿಂದ ಬೋಳಾರದ ಶಾದಿಮಹಲ್‌ನಲ್ಲಿ ಇತ್ತೀಚೆಗೆ ‘ಸಾಮಾಜಿಕ ಸಾಮರಸ್ಯ-ಪ್ರವಾದಿ ಮುಹಮ್ಮದ್ (ಸ) ಸಂದೇಶದ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ಚರ್ಚಾಕೂಟ ನಡೆಯಿತು.

ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಕಾರ್ಯದರ್ಶಿ ಇಸ್ಹಾಕ್ ಪುತ್ತೂರು ಮಾತನಾಡಿ, ಪ್ರಥಮ ಪ್ರವಾದಿ ಆದಂ (ಅ)ರಿಂದ ಪ್ರವಾದಿ ಮುಹಮ್ಮದ್ (ಸ)ರವರೆಗಿನ ಎಲ್ಲಾ ಪ್ರವಾದಿಗಳ ಸಂದೇಶಗಳನ್ನು ಕುರ್‌ಆನ್ ದೃಢೀಕರಿಸುತ್ತದೆ. ಎಲ್ಲಾ ಪ್ರವಾದಿಗಳು ಜನರ ಬಗ್ಗೆ ಕಾಳಜಿ ಉಳ್ಳರಾಗಿದ್ದರು. ನಮ್ಮಲ್ಲಿ ಮಾನವೀಯ ಗುಣಗಳು ಬೆಳೆಯಬೇಕು. ಕುಟುಂಬದ ನೆಲೆಯಲ್ಲಿ ತಂದೆ-ತಾಯಿಯರ, ಸಂಬಂಧಿಕರ, ನೆರೆಹೊರೆಯವರ ಹಕ್ಕುಗಳನ್ನು ಪಾಲಿಸುವಂತಾಗಬೇಕು. ಹಾಗೂ ದೇವನ ಅನುಗ್ರಹ ಪಡೆಯಲು ಜನರೊಂದಿಗೆ ಉತ್ತಮವಾಗಿ ವ್ಯವಹರಿಸಬೇಕು ಎಂದರು.

ಅನಂತರ ಚರ್ಚೆಯಲ್ಲಿ ಬಂದ ಪ್ರಶ್ನೆಗಳ ಮೇಲೆ ಚರ್ಚೆ ನಡೆಯಿತು.

 ಸಾಲಿಹ್ ಮುಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News