ಮನೆಕಳುವು : ಸಾವಿರಾರು ಮೌಲ್ಯದ ನಗನಾಣ್ಯ ಲೂಟಿ

Update: 2016-12-06 14:07 GMT

ಭಟ್ಕಳ, ಡಿ.6 :  ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯಲ್ಲಿದ್ದ ಬಟ್ಟೆಬರೆ, ಚಿನ್ನಾಭರಣ ಸೇರಿದಂತೆ 17ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಲೂಟಿಮಾಡಿ ಪರಾರಿಯಾಗಿರುವ ಘಟನೆ ನಗರ ಠಾಣಾ ವ್ಯಾಪ್ತಿಯ ನಾಗಪ್ಪ ನಾಯ್ಕ ರಸ್ತೆಯ ರಜನಿ ಮಾದೇವ ಭಟ್ ಎಂಬುವವರ ಮನೆಯಲ್ಲಿ ಜರಗಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿನ ಸಲಕರಣೆಗಳನ್ನು ಬಳಸಿ ಪಕ್ಕದ ಮನೆಯಲ್ಲಿ ಯಾರು ಇಲ್ಲದ ಸಮಯ ಗಮನಿಸಿ ರಾತ್ರಿ ಹೊತ್ತು ಮನೆಯ ಎದುರಿಗಿನ ಬಾಗಿಲನ್ನು ಪಿಕಾಸಿನಿಂದ ಒಡೆದು ಹಾಕಿ, ಮನೆಯಲ್ಲಿನ ನಗದು ಸೇರಿದಂತೆ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಮನೆಯ ಮಾಲೀಕರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮನೆಯವರೆಲ್ಲ ಆಸ್ಪತ್ರೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಮನೆಯಲ್ಲಿ ಒಟ್ಟು  17 ಸಾವಿರ ಮೌಲ್ಯದ ಕಳ್ಳತನವಾಗಿದ್ದು, ಅದರಲ್ಲಿ ಒಂದು ಉಂಗುರ, ಎರಡು ಕಿವಿ ಓಲೆ, ಒಂದು ಮೂಗಿನ ಬೊಟ್ಟು, 8000 ನಗದು ಹಾಗೂ  12 ಪ್ಯಾಂಟ್‌ಗಳನನು ದೋಚಿ ಪರಾರಿಯಾಗಿದ್ದಾರೆ.

ನಂತರ ಕಳ್ಳತನದ ಬಳಿಕ ಮನೆಯ ಹೊರಗಡೆ ಎರಡು ಬ್ಯಾಗ್ ಹಾಗೂ 5 ರೂಪಾಯಿ ನಾಣ್ಯ ಸಂಗ್ರಹಿಸ್ಪಟ್ಟ ಪ್ಲಾಸ್ಟಿಕ್ ಚೀಲವನ್ನು ಬಿಟ್ಟು ಹೋಗಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭಟ್ಕಳ ಪೋಲೀಸ್ ಠಾಣೆಯ ಸಿ.ಪಿ.ಐ. ಸುರೇಶ ನಾಯಕ. ಪಿಎಸೈ ಪರಮೇಶ್ವರ, ಪಿಎಸ್‌ಐ ಕುಡಕುಂಟಿ ಪರಿಶೀಲನೆ ನಡೆಸಿದ್ದಾರೆ.  ದೂರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News