ಸರ ಸುಲಿಗೆ: ಆರೋಪಿಗಳಿಬ್ಬರ ಬಂಧನ

Update: 2016-12-06 17:04 GMT

ಮಂಗಳೂರು, ಡಿ. 6: ದೇವಸ್ಥಾನದ ವರ್ಷಾವಧಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳ ಸರ ಕಳವು ಮಾಡಿದ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ದಿಂಡಿಗಲ್ನ ನಿವಾಸಿಗಳಾದ ಮುತ್ತುಮಾರಿ (38) ಮತ್ತು ನಂದಿನಿ (20) ಬಂಧಿತ ಆರೋಪಿಗಳು.

ಪಾವಂಜೆಯ ಜ್ಞಾನ ಶಕ್ಥಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಚಂಪಾ ಷಷ್ಟಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳ ಚಿನ್ನದ ಸರಗಳನ್ನು ಸುಲಿಗೆ ಮಾಡಿದ್ದ ಮಾಡಿದ್ದ ಆರೋಪದಲ್ಲಿ ಈ ಮಹಿಳೆಯರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಸುಲಿಗೆ ಮಾಡಿದ ಸುಮಾರು 98 ಗ್ರಾಂನ ನಾಲ್ಕು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಚಿನ್ನದ ಸರಗಳ ವೌಲ್ಯ 2,50,000 ರೂ. ಎಂದು ಅಂದಾಜಿಸಲಾಗಿದೆ.

 ಮುಲ್ಕಿ ಪೊಲೀಸ್ ಠಾಣಾ ನಿರೀಕ್ಷಕ ಅನಂತಪಧ್ಮನಾಭ, ಪಿ.ಎಸ್.ಐ ಚಂದ್ರಶೇಖರಯ್ಯ, ಸಾಂತಪ್ಪ, ಆರ್., ಪ್ರೊಬೆಷನರಿ ಪಿ.ಎಸ್.ಐ ಮಾರುತಿ ಮತ್ತು ಸಿಬ್ಬಂದಿಗಳಾದ ಉಮೇಶ, ಬಸವರಾಜ, ರಾಜೇಶ್, ಅಣ್ಣಪ್ಪ, ಜೋಯ್ಸ್ ಡಿಸೋಜ, ಗೀತಾ ಸಾಲ್ಯಾನ್,ಅಕ್ಷಯಾ, ವಿಜಯಾಲಮಾಣಿ ಮತ್ತು ಸುಪ್ರಿತಾರ ಪತ್ತೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News