ಕಾರ್ಪೊರೇಶನ್ ಬ್ಯಾಂಕ್‌ಗೆ ‘ಅತ್ಯುತ್ತಮ ಎಂಎಸ್‌ಎಂಇ ಬ್ಯಾಂಕ್’ ಪ್ರಶಸ್ತಿ
Update: 2016-12-06 23:31 IST
ಮಂಗಳೂರು, ಡಿ.6: ಕಾರ್ಪೊರೇಶನ್ ಬ್ಯಾಂಕ್ ‘ದಿ ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಇಂಡಿಯಾ’ ವತಿಯಿಂದ ನೀಡಲಾಗುವ ‘ಅತ್ಯುತ್ತಮ ಎಂಎಸ್‌ಎಂಇ ಬ್ಯಾಂಕ್ 2016’ಪ್ರಶಸ್ತಿಗೆ ಪಾತ್ರವಾಗಿದೆ. ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಜಯ್ ಕುಮಾರ್ ಗಾರ್ಗ್ ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸರಕಾರದ ಎಂಎಸ್‌ಎಂಇ ರಾಜ್ಯ ಸಚಿವ ಹರಿಭಾಯಿ ಪಾರ್ಥಿ ಭಾಯಿ ಅವರಿಂದ ನಾಲ್ಕನೆ ಬಾರಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ದಿ ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಇಂಡಿಯಾ 1920 ರಲ್ಲಿ ಆರಂಭವಾಗಿದ್ದು 300ಕ್ಕೂ ಅಧಿಕ ಶಾಖೆಗಳನ್ನು 4ಲಕ್ಷ ಸದಸ್ಯರನ್ನು ದೇಶಾದ್ಯಂತ ಹೊಂದಿದೆ. ಕಾರ್ಪ್ ಬ್ಯಾಂಕ್‌ನ 177 ಶಾಖೆಗಳು ವಿಶೇಷವಾಗಿ ಎಂಎಸ್‌ಎಂಇ ಬಗ್ಗೆ ಗಮನಹರಿಸಿವೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಮೂಲಕ 985 ಕೋಟಿ ರೂ.ಯನ್ನು ಸಣ್ಣ ಘಟಕಗಳಿಗೆ ನೀಡಿ ಬ್ಯಾಂಕ್ ಸಾಧನೆಮಾಡಿದೆ ಎಂದು ಪ್ರಕಟನೆೆ ತಿಳಿಸಿದೆ.