ನಾಳೆ ಆಯುರ್ಧಾಮ ಆಸ್ಪತ್ರೆ ಉದ್ಘಾಟನೆ
Update: 2016-12-06 23:38 IST
ಮಂಗಳೂರು, ಡಿ.6: ಇಲ್ಲಿನ ತಲಪಾಡಿಯ ಶಾರದಾ ನಿಕೇತನ ಮುಂಭಾಗದ ಪ್ರಕೃತಿ ಮನೋಹರ ಪರಿಸರದಲ್ಲಿ ‘ಶಾರದಾ ಆಯುರ್ಧಾಮ’ ಆಸ್ಪತ್ರೆಯು ಡಿ.8ರಂದು ಕಾರ್ಯಾರಂಭಗೊಳ್ಳಲಿದೆ ಎಂದು ತುಳುನಾಡು ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಪ್ರೊ. ಎಂಬಿ. ಪುರಾಣಿಕ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾರದಾ ಆಯುರ್ಧಾಮದಲ್ಲಿ ಭಾರತೀಯ ಪ್ರಾಚೀನ ಪರಂಪರೆಯ ಸುಸಜ್ಜಿತ ಹೆಂಚಿನ ಭವ್ಯವಾದ ಭವನ, ಹವಾ ನಿಯಂತ್ರಿತ ಕೊಠಡಿಗಳು, ಧ್ಯಾನ, ಯೋಗ ಮಂದಿರ ಮತ್ತಿತರ ವ್ಯವಸ್ಥೆಗಳನ್ನು ಆಸ್ಪತ್ರೆ ಹೊಂದಿದೆ. 100 ಮಂಚಗಳ ವ್ಯವಸ್ಥೆ ಹೊಂದಿರುವ ಆಯುರ್ವೇದ ಆಸ್ಪತ್ರೆಯ ಕಟ್ಟಡ ಶಿಲಾನ್ಯಾಸ ಮತ್ತು ಆಯುರ್ವೇದ ಕಾಲೇಜಿನ ಕಟ್ಟಡಕ್ಕೂ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಜಯರಾಮ್ ಭಟ್ ವಹಿಸಲಿದ್ದು, ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು ಎಂದರು.