×
Ad

ವಿಶೇಷಚೇತನರ ಗುರುತಿಸುವಿಕೆ ಶಿಬಿರ

Update: 2016-12-06 23:52 IST

ಬೆಳ್ತಂಗಡಿ, ಡಿ.6: ವಿಶೇಷ ಚೇತನರ ಉಚಿತ ತಪಾಸಣೆ ಹಾಗೂ ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆಯ ಶಿಬಿರ ಡಿ.11ರಂದು ಬೆಳ್ತಂಗಡಿ ತಾಲೂಕು ಆಸ್ಪತ್ರೆ ಹಾಗೂ ಜ.15 ರಂದು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.
 ಈ ದಿನಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯುವ ಶಿಬಿರದ ಪ್ರಯೋಜನ ಪಡೆಯಲಿಚ್ಛಿಸುವವರು ಎಪಿಎಲ್ ಅಥವಾ ಬಿಪಿಎಲ್ ಪಡಿ ತರ ಚೀಟಿ ಹಾಗೂ ಆಧಾರ್ ಕಾರ್ಡ್ ತರಬೇಕು. ವಿಕಲಾಂಗ ತೋರುವ 6 ಭಾವಚಿತ್ರಗಳನ್ನು ತರಬೇಕು. ಈಗಾಗಲೇ ಗುರುತು ಚೀಟಿ ಹೊಂದಿರು ವವರಿಗೆ ಮತ್ತೊಮ್ಮೆ ಅವಕಾಶ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News