ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2016-12-07 00:05 IST
ಕುಂದಾಪುರ, ಡಿ.6: ಕೊರ್ಗಿ ಗ್ರಾಮದ ಅರೆಕಲ್ಲು ನಿವಾಸಿ ಮಹಾಲಿಂಗ ಶೆಟ್ಟಿ ಎಂಬವರ ಪತ್ನಿ ಜಲಜಾ(62) ಎಂಬವರು ನ.5ರಂದು ಮಧ್ಯಾಹ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಗಂಗೆ ನಿವಾಸಿ ಶೇಷಿ ಮೊಗೇರ್ತಿ(72) ಮನೆ ಸಮೀಪದ ಕಡುವಿನ ಬಳಿ ಸೌಪರ್ಣಿಕಾ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಮೃತದೇಹ ಡಿ.5ರಂದು ಸಂಜೆ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.