×
Ad

ಸೌತ್ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಮಹಾಸಭೆ , ಸನ್ಮಾನ

Update: 2016-12-07 16:53 IST

ಮಂಗಳೂರು, ಡಿ.7: ಮಂಗಳೂರು ಸೌತ್ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಇದರ 2014 ರಿಂದ 2016ರ ಸಾಲಿನ ಮಹಾಸಭೆ ಮತ್ತು 2016 ರಿಂದ 2019 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ  ಜಿಲ್ಲಾ ಮದ್ರಸ ಮ್ಯಾನೇಜ್‌ಮೇಂಟ್ ಅಧ್ಯಕ್ಷರಾದ ಐ ಮೊದಿನಬ್ಬ ಹಾಜಿಯವರ ಅಧ್ಯಕ್ಷತೆಯಲ್ಲಿ ರೇಂಜ್ ಆಫೀಸಿನಲ್ಲಿ  ಜರಗಿತು. 

ಬಿಜೆಎಂ ಕಣ್ಣೂರು ಖತೀಬರಾದ ಮೊಹಮ್ಮದ್ ಶರೀಫ್ ಅರ್ಶದಿಯವರು ದುವಾ ನೆರವೇರಿಸಿದರು. 

 ದ.ಕ ಜಿಲ್ಲಾ ಮದ್ರಸ ಮ್ಯಾನೇಜ್‌ಮೇಂಟ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷ ಐ ಮೊದಿನಬ್ಬ ಹಾಜಿ, ಪ್ರ.ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಮತ್ತು ಕೋಶಾಧಿಕಾರಿ ಶಾಹುಲ್ ಹಮೀದ್ ಮೆಟ್ರೋ ಹಾಗೂ ಅಡ್ಯಾರ್ ಕಣ್ಣೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಹನೀಫಿಯವರ ಮತ್ತು ಕಾರ್ಯದರ್ಶಿ ಉಸ್ಮಾನ್ ಪೈಝಿಯರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷರಾಗಿ  ನಝೀರ್ ವಲಚ್ಚಿಲ್ ಪದವು ಪುನರಾಯ್ಕೆಯಾದರು.  

ಉಪಾಧ್ಯಕ್ಷರಾಗಿ  ಅಬ್ದುಲ್ ರಹಿಮಾನ್ ಹಾಜಿ ಸಿಝರ್, ಯೂಸೂಫ್ ಮಿಜಾರ್,  ಮೊಹಮ್ಮದ್ ಯಾಕೂಬು ವಿಜಯ ನಗರ,  ಪ್ರಧಾನ ಕಾರ್ಯದರ್ಶಿಯಾಗಿ  ಡಿ. ಅಬ್ದುಲ್ ಹಮೀದ್ ಬೋರುಗುಡ್ಡೆ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಬಜಾಲ್ ಪಡ್ಪು ಆಯ್ಕೆಯಾದರು.  

ಜೊತೆ ಕಾರ್ಯದರ್ಶಿಯಾಗಿ  ಇಬ್ರಾಹಿಂ ಮಾರಿಪಳ್ಳ ಅಬೂಬಕ್ಕರ್ ಜಲ್ಲಿಗುಡ್,  ಸಂಘಟನಾ ಕಾರ್ಯದರ್ಶಿಯಾಗಿ  ಎ. ಬಿ ಹೈದರ್ ವಲಚ್ಚಿಲ್ ಪದವು ಪತ್ರಿಕಾ ಕಾರ್ಯದರ್ಶಿಯಾಗಿ  ಇಂತಿಯಾರ್ ಬೀಡು ಆಯ್ಕೆಯಾದರು, ಸಲಹೆಗಾರರಾಗಿ ಹಸನ್ ಕುಂಞಿ, ಡಿ. ಎಂ ಮೊಹಮ್ಮದ್ ಹಾಜಿ ಹಮೀದ್ ಹಾಜಿ ಕೆ.ಎಸ್.ಎಚ್,   ಖಾಸಿಂ ವಲಚ್ಚಿಲ್ ಆತಲೆ, ಅಬ್ದುಲ್ ರಹಿಮಾನ್ ಅಡ್ಯಾರು ಕಟ್ಟೆ ಯವರನ್ನು ಆರಿಸಲಾಯಿತು.

 ಮೊಹಮ್ಮದ್ ಶರೀಫ್ ಬಲ್ಲೂರು ಗುಡ್ಡೆ ಪ್ರೊ. ಕೋ-ಆರ್ಡಿನೇಟರ್ ಹಾಗೂ 16 ಮದ್ರಸಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News