ತಾಲೂಕು ಮಟ್ಟದ ಉಚಿತ ಬೈಸಿಕಲ್ ವಿತರಣೆ
ಪುತ್ತೂರು,ಡಿ.7: ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರ ಉಚಿತ ಸೈಕಲ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಬುಧವಾರ ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡಿ ಮಾತನಾಡಿದರು. ಇದೀಗ ಸಾಕಷ್ಟು ಶೈಕ್ಷಣಿಕ ಸುಧಾರಣೆಗಲಾಗಿದ್ದು, ಕಲಿಕೆಗೆ ಪೂರಕವಾದ ಸಾಕಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದ ಅವರು ಈ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ 3009 ಬೈಸಿಕಲ್ ನೀಡಲಾಗುತ್ತಿದ್ದು, 1518 ಬಾಲಕರು, 1432 ಬಾಲಕಿಯರು, ಹಾಸ್ಟೆಲ್‌ನಲ್ಲಿರುವ 34 ಬಾಲಕರು ಹಾಗೂ 25 ಬಾಲಕಿಯರು ಇದರ ಪ್ರಯೋಜನ ಪಡೆದುಕೊಳ್ಳಲಿಲದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಸುಜೀಂದ್ರ ಪ್ರಭು, ಮಾಜಿ ಅಧ್ಯಕ್ಷರಾದ ಜಗದೀಶ್ ನೆಲ್ಲಿಕಟ್ಟೆ, ಸೂತ್ರಬೆಟ್ಟು ಜಗನ್ನಾಥ ರೈ, ಗಣೇಶ್ ರಾವ್ ಉದ್ಯಮಿ ಆನಂದ್, ಶಾಲೆಯ ಕಾರ್ಯಾಧ್ಯಕ್ಷ ಜೋಕಿಂ ಡಿ’ಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ಪೌರಾಯುಕ್ತೆ ರೂಪಾ ಶೆಟ್ಟಿ, ಉಪ ಪ್ರಾಂಶುಪಾಲ ಶಿವರಾಮ ಹೆಬ್ಬಾರ್, ಹಿರಿಯ ಕ್ರೀಡಾಪಟು ಪ್ರಕಾಶ್ ರೈ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ,ಶಿಕ್ಷಣ ಸಂಯೋಜಕ ಲೋಕಾನಂದ ಮತ್ತಿತರರು ಉಪಸ್ಥಿತರಿದ್ದರು.