ಪಿಲಿಕುಳ ಆಧುನಿಕ ಸಂಸ್ಕೃತಿ ಗ್ರಾಮವಾಗಿ ಪರಿವರ್ತನೆಗೆ ಕ್ರಮ: ಲೋಬೊ

Update: 2016-12-07 11:33 GMT

ಮಂಗಳೂರು, ಡಿ.7: ಪಿಲಿಕುಳ ನಿಸರ್ಗಧಾಮವನ್ನು ಆಧುನಿಕ ಸಂಸ್ಕೃತಿ ಗ್ರಾಮವನ್ನಾಗಿ ಮಾಡುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದರು.

ಪಿಲಿಕುಳದ ಕೆರೆಯ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈ ಕೆರೆ ಗ್ರಾಮೀಣ ಭಾಗದ ಹಿಂದಿನ ವಾತಾವರಣವನ್ನು ತೋರಿಸುತ್ತಿದೆ. ದನ ಕರುಗಳಿಗೆ ಹಾಗು ಬಟ್ಟೆ ಒಗೆಯುವುದಕ್ಕೆ ,  ಹೀಗೆ ಬದುಕಿನ ಎಲ್ಲ ಆವಶ್ಯಕತೆಗಳಿಗೆ ಈ ಕೆರೆ ಸಾಕ್ಷಿಯಾಗುತ್ತಿದೆ. ಈ ಕೆರೆಯನ್ನು ಮತ್ತೆ ಪುನರುಜ್ಜೀವನಗೊಳಿಸುವುದು ಅನಿವಾರ್ಯವಾಗಿದೆ. ಇದರ ಕಾಮಗಾರಿಯನ್ನು 4-5 ತಿಂಗಳಲ್ಲಿ ನೀರಾವರಿ ಇಲಾಖೆ ಪೂರ್ಣಗೊಳಿಸುತ್ತದೆ ಎಂದು ಲೋಬೊ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಎನ್.ಜಿ.ಮೋಹನ್, ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕ ಗಾಯತ್ರಿ ನಾಯಕ್, ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಪ್ರಾಜೆಕ್ಟ್ ಇಂಜಿನಿಯರ್ ಚಂದ್ರಕಾಂತ್, ಆಡಳಿತಾಧಿಕಾರಿ ಬಾಬು ದೇವಾಡಿಗ, ಕೊ-ಆರ್ಡಿನೇಟರ್ ಮುಹಮ್ಮದ್ ಬ್ಯಾರಿ, ಭುವನೇಶ್ವರ, ಸಣ್ಣ ನೀರಾವರಿ ಇಲಾಖೆಯ ಶೇಷಕೃಷ್ಣ ಹಾಗೂ ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News