ತುಳು ಕನ್ನಡಕ್ಕಿಂತಲೂ ಸಮೃದ್ಧ ಭಾಷೆ : ಲಕ್ಷೀನಾರಾಯಣ ಆಸ್ರಣ್ಣ

Update: 2016-12-07 11:52 GMT

 ಮುಲ್ಕಿ, ಡಿ.7:  ತುಳು ಕನ್ನಡಕ್ಕಿಂತಲೂ ಹೆಚ್ಚಿನ ಶಬ್ದ ಭಂಡಾರ ಹೊಂದಿರುವ ಸಮೃದ್ಧ ಭಾಷೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು.

   ಡಿ.9 ರಿಂದ 1ರ ವರೆಗೆ ಕಾಸರಗೋಡು ಸಮೀಪದ ಬದಿಯಡ್ಕದಲ್ಲಿ ನಡೆಯಲಿರುವ ‘ಯುವ ವಿಶ್ವ ತುಳುವರೆ ಆಯನೊ-2016’ ಸಮ್ಮೇಳನದಲ್ಲಿ ಪ್ರದರ್ಶಿಸಲ್ಪಡುವ ದೇವದಾಸ ಈಶ್ವರ ಮಂಗಲ ರಚಿಸಿದ ಶ್ರೀ ದೇವಿ ಮಹಾತ್ಮೆ ಕನ್ನಡ ಯಕ್ಷಗಾನದ ತುಳು ಕೃತಿಯನ್ನು ಬುಧವಾರ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಕಟೀಲಿನ ಆರು ಯಕ್ಷಗಾನ ಮೇಳಗಳಲ್ಲಿ ಒಂದು ಮೇಳದಲ್ಲಿ ತುಳು ಪೌರಾಣಿಕ ಯಕ್ಷಗಾನ ಪ್ರದರ್ಶಿಸಬೇಕೆಂಬ ವಿಶ್ವ ತುಳುವೆರೆ ಆಯನೊ ಸಮಿತಿಯ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಲಾಗುದು ಎಂದು ಭರವಸೆ ನೀಡಿದರು.

   ವಿಶ್ವ ತುಳು ಆಯನ ಸಮಿತಿಯ ಪಧಾನ ಕಾರ್ಯದರ್ಶಿ ರಾಜೇಶ್ ಆಳ್ವ ಮಾತನಾಡಿ, ಆಧುನಿಕ ಕಾಲದಲ್ಲಿ ತುಳು ಸಂಸ್ಕೃತಿ ದಾರಿ ತಪ್ಪುತ್ತಿದೆ. ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಕರ್ತವ್ಯ ನಮಗಿದೆ ಎಂದರು.

    ಈ ಸಂದರ್ಭ ಪ್ರಸಂಗ ಕರ್ತ ದೇವದಾಸ್ ಈಶ್ವರಮಂಗಲ ಅವರನ್ನು ಲಕ್ಷೀನಾರಾಯಣ ಆಸ್ರಣ್ಣರು ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯ ಪ್ರಾಣ ಕಿನ್ನಿಗೋಳಿ, ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್, ವಿಶ್ವ ತುಳುವೆರೆ ಆಯನೋ-2016 ಸಮಿತಿ ಸಂಚಾಲಕ ತಿಮ್ಮಪ್ಪರೈ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅಖಿಲ ಭಾರತ ತುಳು ಒಕ್ಕೂಟದ ಶಶಿದರ ಶೆಟ್ಟಿ, ಟೈಮ್ಸ್ ಆಫ್ ಕುಡ್ಲಾ ಪತ್ರಿಕೆಯ ಸಂಪಾದಕ ಎಸ್. ಆರ್. ಬಂಡಿಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News