ರಾಷ್ಟ್ರೀಯ ಚಾಂಪಿಯನ್‌ಶಿಪ್ : ಆಳ್ವಾಸ್‌ನ ಭವಿಷ್ಯಳಿಗೆ ಬೆಳ್ಳಿ ಪದಕ

Update: 2016-12-07 12:22 GMT

 ಮೂಡುಬಿದಿರೆ, ಡಿ.7  :  ಒಡಿಸ್ಸಾದ ಭುವನೇಶ್ವರದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಜೂನಿಯರ್ ವೇಯ್ಟಿಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಭವಿಷ್ಯ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.

69ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿರುವ ಭವಿಷ್ಯ ಸ್ನಾಚ್‌ನಲ್ಲಿ 70ಕೆಜಿ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 90ಕೆಜಿ , ಒಟ್ಟು 160 ಕೆಜಿ ಭಾರವನ್ನೆತ್ತಿ ಬೆಳ್ಳಿಯ ಪದಕವನ್ನು ಪಡೆದಿರುವ ಈಕೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News