×
Ad

ಯೆನೆಪೊಯ ವಿದ್ಯಾಲಯದಲ್ಲಿ ವಿಚಾರ ಸಂಕಿರಣ

Update: 2016-12-07 17:58 IST

ಮಂಗಳೂರು, ಡಿ.7: ದೇರಳಕಟ್ಟೆಯ ಯೆನೆಪೊಯ ದಂತ ಮಹಾವಿದ್ಯಾಲಯದಲ್ಲಿ ‘ರ್ಯಾಗಿಂಗ್: ಒಂದು ಮಹಾ ಪಿಡುಗು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಭಾರತದ ಡೆಂಟಲ್ ಕೌನ್ಸಿಲ್‌ನ ಸದಸ್ಯ ಡಾ. ಶಿವಶರಣ್ ಶೆಟ್ಟಿ ರ್ಯಾಗಿಂಗ್‌ನಿಂದ ವಿದ್ಯಾರ್ಥಿಗಳ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಾಗಳು ಮತ್ತು ರ್ಯಾಗಿಂಗ್ ಮಾಡಿದವರ ಮೇಲೆ ಜರಗಿಸಬಹುದಾದ ಕಾನೂನು ಕ್ರಮಗಳ ಬಗ್ಗೆ ತಿಳಿಸಿದರು.

ಯೆನೆಪೊಯ ದಂತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಶಾಮ್ ಎಸ್. ಭಟ್ ಮತ್ತು ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್ ಕಾರ್ಯಾದರ್ಶಿ ಡಾ. ಅಖ್ತರ್ ಹುಸೈನ್ ಉಪಸ್ಥಿತರಿದ್ದರು.

ಯೆನೆಪೊಯ ದಂತ ಮಹಾವಿದ್ಯಾಲಯದಲ್ಲಿ ರ್ಯಾಗಿಂಗ್ ವಿರುದ್ಧ ಕೈಗೊಂಡಿರುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ  ಪ್ರೊ. ಡಾ. ರಾಜೇಶ್ ಶೆಟ್ಟಿ ಮಾಹಿತಿ ನೀಡಿದರು.

ಯೆನೆಪೊಯ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಚ್. ಶ್ರೀಪತಿ ರಾವ್ ಸ್ವಾಗತಿಸಿದರು.

ಪ್ರೊ. ಡಾ. ಸಂದೀಪ್ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ಡಾ. ಮಲ್ಲಿಕಾ ಶೆಟ್ಟಿ ಕಾರ್ಯಾಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News