×
Ad

ಮೂರು ದಿನಗಳಿಂದ ನೀರಿಲ್ಲ!!!!!

Update: 2016-12-07 21:40 IST

ಬಂಟ್ವಾಳ, ಡಿ.7 :  ಕಳೆದ ಮೂರು ದಿನಗಳಿಂದ ಬಿ.ಸಿ.ರೋಡ್ ನಗರಕ್ಕೆ ನೀರು ಪೂರೈಕೆಯಾಗದಿರುವುದರಿಂದ ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ.

ಕಳೆದ ಭಾನುವಾರದಿಂದ ಗೂಡಿನಬಳಿರುವ ಪುರಸಭೆಯ ಮುಖ್ಯ ಕೊಳವೆಯಿಂದ ನೀರುಪೂರೈಕೆ ಸ್ಥಗಿತಗೊಂಡಿದೆ. ನೀರಿನ ಪೈಪ್ ಹೊಡೆದು ಹೋಗಿರುವ ಹಿನ್ನಲೆಯಲ್ಲಿ ಬಿ.ಸಿ.ರೋಡಿಗೆ ನೀರುಪೂರೈಕೆ ಸ್ಥಗಿತಗೊಂಡಿದೆಯೆನ್ನಲಾಗಿದೆ.

ಮಂಗಳವಾರ ಈ ಪೈಪನ್ನು ದುರಸ್ಥಿ ಮಾಡಲಾಗಿತ್ತಾದರೂ ಇಡೀ ಹೊತ್ತು ವಿದ್ಯುತ್ ಸ್ಥಗಿತಗೊಂಡಿರುವುದರಿಂದ  ನೀರು ಶೇಖರಣೆಯಾಗಿರಲಿಲ್ಲ ಎನ್ನಲಾಗಿದೆ. ಆದರೆ ಸಂಜೆಯ ವೇಳೆಗೆ ದುರಸ್ತಿ ಮಾಡಲಾದ ಪೈಪ್ ಮತ್ತೆ ಹೊಡೆದುದರಿಂದ ಬುಧವಾರವು ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ.

ಕೆಲವರು ಅಕ್ಕಪಕ್ಕದ ಬಾವಿಯ ಮೊರೆ ಹೋದರೆ,ಕೆಲವರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News