ಮಗು ಕಾಣೆ: ಪತ್ತೆಗೆ ಮನವಿ
ಮಂಗಳೂರು, ಡಿ. 7: ನಾಲ್ಕು ವರ್ಷದ ಮಗು ಮೈಮೂನಾ ಜಬೀನ್ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲ್ಬುರ್ಗಿಯ ಗುಬ್ಬಿ ಕಾಲನಿಯ ಉಮ್ರಾ ಮಸೀದಿ ಬಳಿಯ ನಿವಾಸಿ ಸೈಯ್ಯದ್ ಇಬ್ರಾಹೀಂ ಎಂಬವರ ಪುತ್ರಿ ಮೈಮೂನಾ ಜಬೀನ್ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದಾರೆ.
ಸೈಯ್ಯದ್ ಇಬ್ರಾಹೀಂ ಅವರ ಪತ್ನಿ ಬಿಸ್ಮಿಲ್ಲಾ ಬಿ. ಅವರು ಮೂರು ತಿಂಗಳ ಹಿಂದೆ ಮಾನಸಿಕ ಅಸ್ವಸ್ಥಗೊಂಡು ನಾಲ್ಕು ವರ್ಷದ ಮಗು ಮೈಮೂನಾಳನ್ನು ತನ್ನ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ತಾಯಿ ಮಗು ನಾಪತ್ತೆಯಾದ ಒಂದು ತಿಂಗಳ ಬಳಿಕ ಬಿಸ್ಮಿಲ್ಲಾ ಅವರು ವಾಡಿ ಎಂಬಲ್ಲಿನ ದರ್ಗಾದ ಬಳಿ ಪತ್ತೆಯಾಗಿದ್ದರು. ಆದರೆ, ಮೈಮೂನಾ ಅವರೊಂದಿಗೆ ಇರಲಿಲ್ಲ.
ಆದರೆ, ಹೆಂಡತಿಯ ಬ್ಯಾಗ್‌ನಲ್ಲಿ ಮಗು ಮೈಮೂನಾಳ ಹೆಸರಿನ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಹೊರ ರೋಗಿ ವಿಭಾಗದ ಚೀಟಿಯೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ರಾಹೀಂ ಅವರು ಮಂಗಳೂರು ದಕ್ಷಿಣ ಠಾಣೆಗೆ ದೂರು ನೀಡಿದ್ದಾರೆ.
ಗೋಧಿ ಮೈಬಣ್ಣ, ದುಂಡು ಮುಖ, ಸುಮಾರು 2.5 ಎತ್ತರ ಹಾಗೂ ಸಪೂರ ಶರೀರ ಹೊಂದಿರುವ ಮೈಮೂನಾ ಉರ್ದು ಭಾಷೆ ಮಾತನಾಡಬಲ್ಲವಳಾಗಿದ್ದಾಳೆ.
ಮಗುವಿನ ಪತ್ತೆಯಾದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ 0824-2220518 ಅಥವಾ ನಗರ ನಿಯಂತ್ರಣ ಕೊಠಡಿ 0824-2220400 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ದಕ್ಷಿಣ ಠಾಣಾ ಪೊಲೀಸರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.