ವ್ಯಕ್ತಿ ನಾಪತ್ತೆ
Update: 2016-12-07 22:56 IST
ಮಂಗಳೂರು, ಡಿ. 7: ರಾಮಪ್ಪ ಬಸಪ್ಪ ಬಳನವರ ಎಂಬವರು ಬೈಕಂಪಾಡಿಯ ಬಟ್ರಂಡ್ ಶಾಲೆಯ ಕೊಠಡಿಯಿಂದ ಹೊರ ಹೋದವರಿಗೆ ಕೊಠಡಿಗೆ ವಾಪಾಸು ಬಾರದೆ ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವೆಂಬರ್ 30ರಂದು ರಾಮಪ್ಪ ಬಸಪ್ಪ ಅವರು ಚಹಾ ಕುಡಿದು ಬರುವುದಾಗಿ ಹೇಳಿ ಕೊಠಡಿಯಿಂದ ಹೊರ ಹೋದವರು ವಾಪಾಸು ಬಾರದೆ ಕಾಣೆಯಾಗಿದ್ದಾರೆ ಎಂದು ಅವರ ಹಿರಿಯ ಸಹೋದರ ಶಿವಪ್ಪ ಎಂಬವರು ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಪಣಂಬೂರು ಪೊಲೀಸ್ ಠಾಣೆ 0824-2220530 ಅಥವಾ ಪೊಲೀಸ್ ಕಂಟ್ರೋಲ್ ರೂಂ 0824-2220800, 0824-2220100 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.