×
Ad

ರಾಜ್ಯ ಮಾನವ ಹಕ್ಕುಗಳ ಸಮಿತಿಯಿಂದ ಡಿ.10ರಂದು ರಕ್ತದಾನ ಶಿಬಿರ

Update: 2016-12-07 23:02 IST

ಮಂಗಳೂರು, ಡಿ.7:  ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ತೊಕ್ಕೊಟ್ಟು ಕ್ಲಿಕ್ ಹಾಲ್‌ನಲ್ಲಿ ಡಿ.10ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಜೊಜೊ ಕೆ.ಜೋಸೆಫ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಸಮಿತಿಯು ರಕ್ತದಾನ ಶಿಬಿರದ ದಿನ ವಿಕಲಚೇತನರೊಬ್ಬರಿಗೆ ಗಾಲಿಕುರ್ಚಿ ಹಾಗೂ ಓರ್ಥೋಪೇಡಿಕ್ ಬೆಡ್ ನೀಡಲಿದೆ.

ಈಗಾಗಲೇ ಸಮಿತಿಯು ಉಳ್ಳಾಲ ಪೊಲೀಸ್ ಠಾಣೆ ಹಾಗೂ ಮದನಿ ನಗರ ನಾಗರಿಕರ ಸಹಭಾಗಿತ್ವದಲ್ಲಿ ಮದನಿ ನಗರದಲ್ಲಿ ನಡೆಯುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ 3 ನಾಕಬಂದಿಗಳನ್ನು ಅಳವಡಿಸಿದೆ. ಮುಂದಿನ ದಿನಗಳಲ್ಲಿ ಆ್ಯಂಟಿ ಡ್ರಗ್ಸ್‌ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲ ವರ್ಗದ ಜನರಿಗೆ ಉಚಿತ ಆ್ಯಂಬುಲೆನ್ಸ್ ಒದಗಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾನವ ಹಕ್ಕುಗಳ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಉಪಾಧ್ಯಕ್ಷ ಅನ್ವರ್ ಹುಸೈನ್ ಕೆ.ಪಿ., ಮಹಿಳಾ ಮೋರ್ಚಾ ಸದಸ್ಯೆ ಜ್ಯೋತಿ ಜಾನ್‌ಸನ್, ಸಮಿತಿಯ ಕಾನೂನು ಸಲಹೆಗಾರ ನ್ಯಾಯವಾದಿ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News