×
Ad

ಜೋಕಟ್ಟೆ: ಅಂಜುಮನ್ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ

Update: 2016-12-08 09:55 IST

ಅಂಜುಮನ್ ವಿದ್ಯಾ ಸಂಸ್ಥೆಯ 29ನೆ ವಾರ್ಷಿಕೋತ್ಸವವು ಅಂಜುಮನ್ ಖುವ್ವತುಲ್ ಇಸ್ಲಾಮ್(ರಿ) ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎ.ಅಬ್ದುರ್ರಶೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಿದ್ಯಾಸಂಸ್ಥೆಯ ಸಂಚಾಲಕ ಎಂ.ಮೂಸಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಪಸಂಖ್ಯಾತ ಇಲಾಖಾಧಿಕಾರಿ ಹಾಜಿ ಎ.ಉಸ್ಮಾನ್ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹೆಲ್ಪ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ನಾಸಿರ್ ಮೊಯಿದಿನ್ ವಿತರಿಸಿ ಮಾತನಾಡಿದರು.

ಕಳೆದ ಸಾಲಿನ ಎಸೆಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಲು ಪರಿಶ್ರಮಿಸಿದ ಶಿಕ್ಷಕ-ಶಿಕ್ಷಕಿಯರಿಗೆ ಶಾಸಕ ಅಭಯಚಂದ್ರ ಜೈನ್ ಗೌರವ ಪುರಸ್ಕಾರವನ್ನು ನೀಡಿ ಶ್ಲಾಘಿಸಿದರು.

ಜೋಕಟ್ಟೆಯ ಪ್ರತಿಷ್ಠಿತ ಅಂಜುಮನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಆಟದ ಮೈದಾನ ಹೊಂದಲು ಸಹಕರಿಸಿದ ಜೋಕಟ್ಟೆಯ ಹೆಮ್ಮೆಯ ಸುಪುತ್ರ ಹಾಜಿ ಝಕರಿಯ್ಯಾ ಜೋಕಟ್ಟೆಯವರನ್ನು ಸಂಸ್ಥೆಯ ಪರವಾಗಿ ಇದೆ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲಾ ಪ್ರಾಂಶುಪಾಲೆ ಶ್ರೀಮತಿ ಶಾಂತಿ ವಿಜಯ್ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಅಥಿತಿಯಾಗಿ ಟ್ರೆಡೆಂಟ್ ಮಾಲಕ ಮನೋಜ್ ಶೆಟ್ಟಿ,ತಾಲೂಕ್ ಪಂಚಾಯತ್ ಸದಸ್ಯರಾದ ಬಶೀರ್ ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರೆಸಿಲ್ಲಾ ಮೊಂತೆರೋ, ಸ್ಥಳೀಯ ಮಸೀದಿಯ ಅಧ್ಯಕ್ಷರುಗಳಾದ ಒ.ಎಂ.ಅಬ್ದುಲ್ ಖಾದರ್,ಸಂಶುದ್ದೀನ್,ವಿದ್ಯಾ ಸಂಸ್ಥೆಯ ಸಹಸಂಚಾಲಕರಾದ ಎ.ಎಂ.ಅಥಾವುಲ್ಲಾ,ಹಾಜಿ ಜೆ.ಮುಹಮ್ಮದ್,ಅಮಿರುದ್ದೀನ್,ಅಂಜುಮನ್ ಯತೀಮ್ ಖಾನ್ ಸಂಚಾಲಕರಾದ ಅಬ್ದುಲ್ ಖಾದರ್ ಗೋವಾ,ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಶೆರೀಫ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷರು,ಸಂಚಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಅನನ್ಯ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶುಭ ರವೀಂದ್ರ ವಂದಿಸಿದರು.  ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News