ಮಂಗಳೂರು ಪೊಲೀಸರಿಂದ ಮುಂಬೈ ಫೇಸ್ ಬುಕ್ ಕಚೇರಿಗೆ ಭೇಟಿ, ಸಿಬ್ಬಂದಿಯ ವಿಚಾರಣೆ
Update: 2016-12-08 15:15 IST
ಮಂಗಳೂರು, ಡಿ.8: ಫೇಸ್ ಬುಕ್ ನಲ್ಲಿ ಕಟೀಲು ದೇವರ ಕುರಿತ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಫೇಸ್ ಬುಕ್ ಅಸಹಕಾರ ತೋರಿದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಮುಂಬೈಯಲ್ಲಿರುವ ಫೇಸ್ ಬುಕ್ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ..
ಆರೋಪಿಗಳ ಪತ್ತೆಗೆ ಫೇಸ್ ಬುಕ್ ಸಂಸ್ಥೆಯ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಹಾಗೂ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಜಂಟಿಯಾಗಿ ಮುಂಬೈಯಲ್ಲಿರುವ ಫೇಸ್ ಬುಕ್ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಮುಂಬೈ ಪೊಲೀಸರು ಸಹಕಾರ ನೀಡಿದರು.