×
Ad

ಕಣಚೂರು ವಿದ್ಯಾ ಸಂಸ್ಥೆಯಲ್ಲಿ ಪಠ್ಯೇತರ ಚಟುವಟಿಕಾ ದಿನಾಚರಣೆ

Update: 2016-12-08 18:07 IST

ಕೊಣಾಜೆ, ಡಿ. 8: ಕಣಚೂರು ಪಬ್ಲಿಕ್ ಸ್ಕೂಲಿನ 2016-17 ನೇ ಸಾಲಿನ ಪಠ್ಯೇತರ ಚಟುವಟಿಕೆ ದಿನಾಚರಣೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ಮಂಗಳೂರು ಮುಖ್ಯಸ್ಥ ಶ್ರೀನಿವಾಸನ್ ನಂದಗೋಪಾಲ್‌ ,  ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಪಠ್ಯೇತರ ಚಟುವಟಿಕೆಯ ಮಹತ್ವದ ಕುರಿತು ವಿವರಿಸುತ್ತಾ ಮಕ್ಕಳು ಬರೀ ಪುಸ್ತಕದ ಹುಳುವಾಗಿರದೇ ಪ್ರಾಯೋಗಿಕವಾಗಿ ಕಲಿಕೆಯತ್ತ ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.

ಕಣಚೂರು ಸಂಸ್ಥೆಯ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಎಮ್ ಅಬ್ದುಲ್ ರಹಮಾನ್‌ ಮಾತನಾಡುತ್ತಾ,  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು. 

  ಸಮಾರಂಭದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಫಲಕವನ್ನು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಣಚೂರು ವಿದ್ಯಾಸಂಸ್ಥೆಯ ವಿವಿಧ ವಿಭಾಗದ ಪ್ರಾಂಶುಪಾಲರಾದ ಆನಂದಿ.ಕೆ. , ಇಕ್ಬಾಲ್ ಅಹಮದ್ ಅವರು ಉಪಸ್ಥಿತರಿದ್ದರು.

ಕಣಚೂರು ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿದರು.

ವಿದ್ಯಾರ್ಥಿನಿ ಹರ್ಷಿತಾ ಶೆಟ್ಟಿಗಾರ್ ವಂದಿಸಿದರು.

ವಿದ್ಯಾರ್ಥಿನಿಯರಾದ ಕುಮಾರಿ ನಿಶ್ಮಾಹಾಗೂ ಸುಜಾನಕಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News