×
Ad

ಅರಬ್ಬಿ ಸಮುದ್ರದಲ್ಲಿ 1031 ಕಿ.ಮೀ ಈಜಿ ವಿಶ್ವ ದಾಖಲೆ ನಿರ್ಮಿಸಿದ ‘ಸಿ ಹ್ಯಾಕ್ ತಂಡ ’

Update: 2016-12-08 18:50 IST

 ಮಂಗಳೂರು,ಡಿ.7:ಮುಂಬಯಿಯಿಂದ ನ. 26,2008 ರ ಮುಂಬಯಿಯ ಭಯೋತ್ಫಾದಕರ ದಾಳಿಯ ಸಂದರ್ಭದಲ್ಲಿ ಮೃತ ಪಟ್ಟ ಯೊಧರ ಸ್ಮರಣಾರ್ಥ ‘ದೇಶಕ್ಕಾಗಿ ಈಜು ’ಎಂಬ ಧ್ಯೇಯದೊಂದಿಗೆ ನ.26ರಿಂದ ಅರಬ್ಬಿ ಸಮುದ್ರದಲ್ಲಿ ಈಜುತ್ತಾ ಮುಂಬಯಿಂದ ಹೊರಟ ಯೋಧರ ಸಹಿತ 6ಜನರ ‘ಸೀ ಹ್ಯಾಕ್ ’ ತಂಡ (ಡಿ. 8ರಂದು ) ಇಂದು ಗೋವಾ ಮೂಲಕ ಮಂಗಳೂರು ತಲುಪಿದೆ.  

ಮುಂಬಯಿ-ಮಂಗಳೂರು ನಡುವಿನ 1031 ಕಿಲೋ ಮೀಟರ್ ಈಜುವ ಮೂಲಕ ಈ ತಂಡ ಈ ಹಿಂದಿನ ಗಿನ್ನೆಸ್ ದಾಖಲೆಯನ್ನು ಮುರಿದಿದೆ.

ಇಂಡಿಯನ್ ಸ್ವಿಮ್ಮಿಂಗ್ ಫೆಡರೇಶನ್ನಿನ ಅಧಿಕೃತ ವೀಕ್ಷಕರು ಈ ದಾಖಲೆಯನ್ನು ದೃಢೀಕರಿಸಿರುವುದರಿಂದ ಈ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಪಡೆಯಲಿದೆ ಎಂದು ಈಜು ತಂಡದ ನೇತೃತ್ವ ವಹಿಸಿದ್ದ ವಿಂಗ್ ಕಮಾಂಡರ್ ಪರಮವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

   ಈ ಹಿಂದೆ ಅಮೇರಿಕಾದ 6 ಮಂದಿ ಈಜುಗಾರರ ‘ನೈಟ್ ಟ್ರೈನ್ಸ್ ’ತಂಡ 505 ಕಿಲೋಮೀಟರ್ ಸಮುದ್ರದಲ್ಲಿ ಈಜುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತ್ತು.ಇನ್ನೊಂದು ದಾಖಲೆ 200 ಈಜುಗಾರರು 648.75 ಕಿ.ಮೀ ದೂರ ಮುಕ್ತವಾಗಿ ಸಮುದ್ರದಲ್ಲಿ ಈಜಿ ದಾಖಲೆ ನಿರ್ಮಿಸಿದ್ದರು.  ಈ ಎರಡು ದಾಖಲೆಗಳನ್ನು ನಮ್ಮ ತಂಡ ಮುರಿದು ಹೊಸ ದಾಖಲೆ ನಿರ್ಮಿಸಿದೆ.ನಮ್ಮದೆ ತಂಡ ಸೀ ಹ್ಯಾಕ್ ಈ ಹಿಂದೆ 433.11 ಕಿ.ಮೀ ಈಜಿ ನಿರ್ಮಿಸಿದ್ದ ದಾಖಲೆಯನ್ನು ನಾವು ಮುರಿದು ಹೊಸ ದಾಖಲೆ ನಿರ್ಮಿಸಿದ್ದೇವೆ ಎಂದು ಪರಮವೀರ್ ಸಿಂಗ್ ತಿಳಿಸಿದ್ದಾರೆ.

ಈ ತಂಡದಲ್ಲಿ ಪರಮ ವೀರ ಸಿಂಗ್,ಮುಂಬಯಿಯ ಪ್ರತಿನಿಧಿ ರಾಹುಲ್ ಚಿಪ್ಲೂಣ್‌ಕರ್ ,ಮುಂಬೈ ಪೊಲೀಸ್ ಪ್ರತಿನಿಧಿ (ಎಎಸ್‌ಐ ವರ್ಲಿ)ಶ್ರೀಕಾಂತ ಪಲಾಂಡೆ, ಭಾರತೀಯ ವಾಯುಸೇನಾ ವಿಭಾಗದ ಪ್ರತಿನಿಧಿ ವಿಕ್ಕಿ ಟೋಕಸ್, ಮಾಜಿ ವಾಯು ಸೇನಾ ವಿಭಾಗದ ಪ್ರತಿನಿಧಿ ಗುಲ್ಲು ಪಿಲ್ಲಿ ನರಹರಿ, ಮುಂಬೈಯ ವಿದ್ಯಾರ್ಥಿ ಪ್ರತಿನಿಧಿ ಮಾನವ್ ಮೆಹ್ತಾ ಮೊದಲಾದವರ ತಂಡ 1031 ಕಿ.ಮೀ ಈಜಿ ದಾಖಲೆ ನಿರ್ಮಿಸಿದ್ದಾರೆ.

ಸ್ವತಂತ್ರ ವೀಕ್ಷಕರಾಗಿ ಭಾರತೀಯ ಈಜುಗಾರರ ಒಕ್ಕೂಟದ ಪ್ರತಿನಿಧಿ ಶೇಖರ್ ಕಾಳೆ,ಮಾರ್ಗದರ್ಶಕರಾಗಿ ಸುಭೋದ್ ಸುಳೆ ಜೊತೆಗಿದ್ದರು ಎಂದು ಪರಮವೀರ್ ಸಿಂಗ್ ತಿಳಿಸಿದ್ದಾರೆ.

   ಮುಂಬಯಿ ಭಯೋತ್ಫಾಧಕ ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಸಮರ್ಪಣೆ:

ಇದೊಂದು ಅಪೂರ್ವ ಅನುಭವ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿಯಿಂದ ಸಮುದ್ರದ ಮೂಲಕ ಈಜಿ ಮಂಗಳೂರಿನ ತಣ್ಣೀರು ಬಾವಿ ತಲುಪಿದ ತಂಡ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ . ಈ ಸಾಧನೆಯನ್ನು ಮುಂಬಯಿಯಲ್ಲಿ ನ. 26,2008ರಲ್ಲಿ ನಡೆದ ದಾಳಿಯಲ್ಲಿ ಮೃತ ಪಟ್ಟ ಯೋಧರ,ನಾಗರಿಕರ ಕುಟುಂಬಗಳಿಗೆ ಅರ್ಫಿಸುವುದಾಗಿ ಪರಮವೀರ ಸಿಂಗ್ ತಿಳಿಸಿದ್ದಾರೆ.

ಮುಂದೆಯೂ ಇಂತಹ ಉದ್ದೇಶಗಳಿಗಾಗಿ ನಮ್ಮ ಚಟುವಟಿಕೆ ಮುಂದುವರಿಯಲಿದೆ.ಈ ಕಾರ್ಯಕ್ರಮಕ್ಕೆ ಐಡಿಬಿಐ ಬ್ಯಾಂಕ್ ಪ್ರಾಯೋಜಕತ್ವ ವಹಿಸಿದೆ.ರೋಟರಿ ಸಂಸ್ಥೆ,ತಾಜ್ ಸಮೂಹ ಸಂಸ್ಥೆ ಕೈ ಜೋಡಿಸಿದೆ ಎಂದು ಪರಮವೀರ ಸಿಂಗ್ ತಿಳಿಸಿದ್ದಾರೆ.

ಪ್ರಾಯೋಜಕತ್ವ ವಹಿಸಿದ ತಂಡದ ಐಡಿಬಿಐ ಬ್ಯಾಂಕ್‌ನ ಡಿಎಂಡಿ ಕೆ.ಪಿ.ನಾಯರ್ ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News