ಪನ್ನೀರಸೆಲ್ವಂ-ಶಶಿಕಲಾ ಮಾತುಕತೆ
Update: 2016-12-08 19:27 IST
ಚೆನ್ನೈ, ಡಿ.8: ತಮಿಳುನಾಡಿನ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಇಂದು ಪೂರ್ವಾಧಿಕಾರಿಣಿ ಜೆ. ಜಯಲಲಿತಾರ ನಂಬಿಗಸ್ಥೆ ಶಶಿಕಲಾ ನಟರಾಜನ್‌ರೊಂದಿಗೆ ಪೊಯೆಸ್ ಗಾರ್ಡನ್‌ನ ಜಯಾ ನಿವಾಸದಲ್ಲಿ ಸುಮಾರು 2 ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ.
ಸಭೆಯಿಂದ ಹೊರ ಬಂದ ಬಳಿಕ ಪನ್ನೀರಸೆಲ್ವಂ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿಲ್ಲ. ಅವರೊಂದಿಗೆ, ಸಿ.ಶ್ರೀನಿವಾಸನ್, ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಪಿ. ತಂಗಮಣಿ ಸೇರಿದಂತೆ ಹಿರಿಯ ಸಂಪುಟ ಸಹೋದ್ಯೋಗಿಗಳಿದ್ದರು.
ಡಿ.5ರಂದು ಜಯಲಲಿತಾ ನಿಧನರಾಗಿರುವ ಹಿನ್ನೆಲೆಯಲ್ಲಿ ನಡೆದ ಈ ಸಭೆಯಲ್ಲಿ ಯಾವ ವಿಚಾರ ಚರ್ಚಿಸಲಾಯಿತೆಂದು ತಿಳಿದುಬಂದಿಲ್ಲ.
ಜಯಾ ಕಾಲವಾದ ಬಳಿಕ ಒ. ಪನ್ನೀರ ಸೆಲ್ವಂ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡಿದ್ದಾರಾದರೂ ಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಯಾರಾಗಲಿದ್ದಾರೆಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದಾಗ್ಯೂ, ಎಡಿಎಂಕೆಯಲ್ಲಿ ಶಶಿಕಲಾಗೆ ಮಹತ್ವದ ಪಾತ್ರ ಲಭಿಸಬಹುದೆಂಬ ಊಹಾಪೋಹ ಬಲವಾಗಿದೆ.