×
Ad

ಬೆಳ್ತಂಗಡಿ : ಮಹಿಳೆಗೆ ಜೀವ ಬೆದರಿಕೆ

Update: 2016-12-08 21:58 IST

ಬೆಳ್ತಂಗಡಿ,  ಡಿ. 8 : ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಮಹಿಳೆಯೊಬ್ಬಳ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸ್ವಾಧಿನಪಡಿಸಿಕೊಳ್ಳಲು ಯತ್ನಿಸಿದ್ದಲ್ಲದೆ ಜೀವ ಬೆದರಿಕೆಯೊಡ್ಡಿದ ವಿದ್ಯಮಾನ ಸುಲ್ಕೇರಿಯಲ್ಲಿ ನಡೆದಿದೆ.

       ಸುಲ್ಕೇರಿ ಗ್ರಾಮದ ಪಿಲಿಕುಡೇಲು ಎಂಬಲ್ಲಿ ಬಿ.ರಮಣಿ ಎಂಬುವರು 1.18 ಎಕ್ರೆ ಜಮೀನನ್ನು ಹೊಂದಿರುತ್ತಾರೆ. ಈ ಜಮೀನಿನ ಸನಿಹದಲ್ಲಿಯೇ ಗ್ರಾಮದ ಮಹಮ್ಮಾಯಿ ಮನೆಯ ವಿಠಲ ಶೆಟ್ಟಿ ಎಂಬುವರು ಹಾಗೂ ಇತರ ಮೂವರು ಸೇರಿ ರಮಣಿಯವರ ಜಮೀನನ್ನು ಅಕ್ರಮವಾಗಿ ಸ್ವಾಧೀನ ಪಡಿಸಲು ಯತ್ನಿಸಿದ್ದಾರೆ.

ಇವರ ಕೃತ್ಯದ ವಿರುದ್ದ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಆದೇಶ ಊರ್ಜಿತದಲ್ಲಿದ್ದರೂ ಡಿ. 5 ರಂದು ಯಾರೂ ಇಲ್ಲದ ವೇಳೆ ಜಮೀನಿಗೆ ಪ್ರವೇಶಿಸಿ,  ಹಾಕಿದ್ದ ಬೇಲಿಯನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ವಿಠಲ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಕೈ-ಕಾಲು ಮುರಿಸುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ.

ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News