ಕಪ್ಪು ಹಣದ ಹೆಸರಿನಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ -ರೋಬಿನ್ ಮ್ಯಾಥ್ಯೂಸ್

Update: 2016-12-08 18:02 GMT

ಮಂಗಳೂರು,ಡಿ.8:  ಕಪ್ಪು ಹಣದ ಹೆಸರಿನಲ್ಲಿ ಜನಸಾಮಾನ್ಯರು ತಮ್ಮ ಹಣಕ್ಕಾಗಿ ಎಟಿಎಂ,ಬ್ಯಾಂಕ್‌ನ ಬಾಗಿಲಲ್ಲಿ ಭಿಕ್ಷೆಗೆ ಕಾಯುವಂತೆ ಮಾಡಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದ ಮೋದಿ ಸರಕಾರವನ್ನು ಜನ ಕ್ಷಮಿಸಲಾರರು ಎಂದು ಸಮಾಜವಾದಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ರೋಬಿನ್ ಮ್ಯಾಥ್ಯೂಸ್ ಆಕ್ರೋಶ ವ್ಯಕ್ತ ಪಡಿಸಿದರು.

ನಗರದ ಬಲ್ಮಠದ ಕೆಎಂಸಿ ಬಳಿಯ ಸ್ಮಾರ್ಟ್ ಕಟ್ಟಡದಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

    ಚುನಾವಣೆಯ ಸಮದರ್ಭದಲ್ಲಿ ಕಪ್ಪು ಹಣ ತರುತ್ತೇವೆ ಎಂದು ಘೋಷಣೆ ಮಾಡಿದವರು,  ಅದು ಸಾಧ್ಯವಾಗದ ಕಾರಣ ಅವೈಜ್ಞಾನಿಕವಾಗಿ 500,1000 ನೋಟುಗಳನ್ನು ಅಮಾನ್ಯ ಮಾಡಿ ಜನಸಾಮಾನ್ಯರ ಹಣವನ್ನು ಅವರಿಗೆ ಬ್ಯಾಂಕುಗಳಲ್ಲಿ ನೀಡದೆ, ಒಂದು ತಿಂಗಳಿನಿಂದ ಜನರು ಎಟಿಎಂ,ಬ್ಯಾಂಕುಗಳ ಮುಂದೆ ಸಾಲು ನಿಲ್ಲುವಂತೆ ಮಾಡಿದ್ದಾರೆ.  ಅಲ್ಲಿಯೂ ಹಣ ಸಿಗುವುದು ಖಾತ್ರಿಯಿಲ್ಲ. ಇನ್ನೊಂದು ಕಡೆ ಕೋಟ್ಯಾಂತರ ರೂ ಖರ್ಚು ಮಾಡಿ ಮದುವೆ ನಡೆಯುತ್ತದೆ.ಗುಜರಾತಿನಲ್ಲಿ ಕೋಟ್ಯಾಂತರ ರೂ ಹಣದ ಮೂಟೆ ದೊರೆಯುತ್ತಿದೆ.  ಈ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರರ ಪರಿ ನಿರ್ಮಾಣದ ದಿನದಂದೆ ಬಾಬರಿ ಮಸೀದಿ ಕೆಡವಿ ಸಂವಿಧಾನ ದಾಸಯಕ್ಕೆ ವಿರುದ್ಧವಾಗಿ ಬಿಜೆಪಿ ವರ್ತಿಸಿದೆ. ಬಿಜೆಪಿಯವರು ಅಧಿಕಾರ ಸಿಕ್ಕ ನಂತರವೂ ನೀಡಿದ ವಾಗ್ಧಾನ ಮರೆತರು. ಬಿಜೆಪಿಯ ನಿಜ ಬಣ್ಣ ಒಂದೊಂದಾಗಿ ಬಯಲಾಗುತ್ತಿದೆ. ಅಮೇರಿಕಾ,ಜಪಾನ್,ಇಟೆಲಿ,ಜರ್ಮನ್ ಸುತ್ತಿ ಬಂದ ಮೋದಿ ಭಾರತವನ್ನು ಏಕೆ ಒಮ್ಮೆ ಸುತ್ತಿ ಬರುವುದಿಲ್ಲ ?. ಸರಕಾರದ ಈ ಅವ್ಯವಸ್ಥೆಗಳ ವಿರುದ್ಧ ಸಮಾಜವಾದಿ ಪಕ್ಷ ಗಾಂಧಿ, ಲೋಹಿಯಾ, ಅಂಬೇಡ್ಕರ್, ಜೆ.ಪಿಯವರು ತೋರಿದ ಮಾರ್ಗದಲ್ಲಿ ಹೋರಾಟ ನಡೆಸಲಿದೆ ಎಂದು ಮ್ಯಾಥ್ಯೂಸ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿಬಾಬ, ರಾಜ್ಯ ಯುವ ಘಟಕದ ಅಧ್ಯಕ್ಷ ಇಮ್ರಾನ್,     ರಾಜ್ಯ ಎಸ್.ಪಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಮೀವುಲ್ಲಾ, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ.ಮುಹಮ್ಮದ್ ಅಝಾದ್ ಹಾಗೂ ಇತರ ಮುಖಂಡರಾದ ಎಸ್.ಎಂ.ಹಸನ್, ಜುಬೈದಾ ಬೇಗಂ, ಎಂ.ಆರ್.ಅನಿಲ್,ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News