×
Ad

ಕೊಲೆ ಪ್ರಕರಣ : ಇಬ್ಬರ ಬಂಧನ

Update: 2016-12-08 23:37 IST

ಕಾಸರಗೋಡು , ಡಿ.8  : ಬೋವಿಕ್ಕಾನದಲ್ಲಿ   ನಡೆದ  ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಇಬ್ಬರನ್ನು  ಆದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು  ಬೋವಿಕ್ಕಾನ ಮೊದಲ ಮುದಲಪ್ಪಾರದ  ಅಹಮ್ಮದ್ ನಾಸಿರ್ ( 33) ಮತ್ತು ಮುಳಿಯಾರು ಬಾಲನಡ್ಕದ   ಸಾಲಿ ( 26) ಎಂದು ಗುರುತಿಸಲಾಗಿದೆ.  
  ಪೊವ್ವಲ್ ನ ಅಬ್ದುಲ್ ಖಾದರ್ ( 19) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ  ಐದು ಮಂದಿ ಶಾಮೀಲಾಗಿದ್ದು , ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ.

ಡಿ.1ರಂದು ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಕೃತ್ಯ  ನಡೆದಿತ್ತು .

ಕ್ಲಬ್ ಗಳ  ನಡುವೆ ನಡೆದ ಗುಂಪು ಘರ್ಷಣೆ ಯಲ್ಲಿ   ಅಬ್ದುಲ್ ಖಾದರ್  ಕೊಲೆಗೈಯ್ಯಲ್ಪಟ್ಟು,  ಜೊತೆಗಿದ್ದ ಆಸಿಯಾದ್  ಮತ್ತು  ಸತ್ತಾದ್ ಅನಾಸ್  ಗಂಭೀರ  ಗಾಯಗೊಂಡಿದ್ದರು .
  ಕೃತ್ಯದ ಬಳಿಕ  ತಲೆಮರೆರೆಸಿಕೊಂಡಿದ್ದ  ಆರೋಪಿಗಳು ಊರಿಗೆ ಮರಳಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಆರೋಪಿಗಳನ್ನು ಬಂಧಿಸಲಾಗಿದೆ .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News