ಝೆನಿತ್ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ದಂತ ಚಿಕಿತ್ಸೆ

Update: 2016-12-08 18:23 GMT

ಮುಡಿಪು, ಡಿ.8 : ಇಂದಿನ ವಿದ್ಯಾರ್ಥಿ ಸಮೂಹವೇ ರಾಷ್ಟ್ರದ ಸಂಪತ್ತಾಗಿದ್ದು ಅವರ ಆರೋಗ್ಯವೇ ಭಾರತದ ಭದ್ರ ಬುನಾದಿಯಾಗಿದೆ. ಅವರ ಆರೋಗ್ಯದ ಬಗೆಗಿನ  ಕುರಿತಾಗಿ ಉಚಿತ ವೈದ್ಯಕೀಯ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಝೆನಿತ್ ಶಾಲೆಯ ಕಾರ್ಯ ವೈಖರಿ ಶ್ಲಾಘನೀಯ ಎಂದು ಯೇನೆಪೋಯ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ  ಡಾ.ಶ್ಯಾಂ ಎಸ್.ಭಟ್ ಹೇಳಿದರು. 

ಅವರು ಝೆನಿತ್ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ದಂತ ಚಿಕಿತ್ಸೆ ಕಾರ್ಯಗಾರವನ್ನು ಮಾತನಾಡಿದರು.

ಯೇನೆಪೋಯ ವಿಶ್ವವಿದ್ಯಾನಿಲಯದ ದಂತ ಶಾಸ್ತ್ರದ ಮುಖ್ಯ ಪ್ರಾಧ್ಯಾಪಕರಾದ ಡಾ.ಗಣೇಶ್ ಶೆಣೈ ಮಾತನಾಡಿದರು.

  ಝೆನಿತ್ ಶಾಲೆ ಮುಡಿಪು  ಹಾಗೂ ಯೆನೆಪೋಯ  ವಿಶ್ವವಿದ್ಯಾನಿಲಯ ಜಂಟಿಯಾಗಿ ನಡೆಸಿದ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸೆಯನ್ನು ನೀಡಲಾಯಿತು.

ನಂತರದಲ್ಲಿ  ವೈದ್ಯರ ಸಹಯೋಗದೊಂದಿಗೆ ವಿಧ್ಯಾರ್ಥಿಗಳಿಗೆ ವೈದ್ಯಕೀಯ  ಕಾರ್ಯಾಗಾರವು ನಡೆಯಿತು.

ಕಾರ್ಯಕ್ರಮದಲ್ಲಿ ಝೆನಿತ್ ಶಾಲೆಯ ಅಧ್ಯಕ್ಷರಾದ ಮಜೀದ್ ಎಂ., ಸಂಚಾಲಕಿಯಾದ ನಹಾದ ಮಜೀದ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News