ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ವಿವಿಧ ಸೌಲಭ್ಯಗಳ ಸೇರ್ಪಡೆ: ಇಂದು ಲೋಕಾರ್ಪಣೆ

Update: 2016-12-08 18:32 GMT

ಮಂಗಳೂರು, ಡಿ.8: ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ವಿವಿಧ ಸೌಲಭ್ಯಗಳ ಸೇರ್ಪಡೆಯಾಗಿದ್ದು, ಡಿ.9ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
<ಹೊಸ ವಿಐಪಿ ಆ್ಯಂಬುಲೆನ್ಸ್:  ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡುವ ಗಣ್ಯರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಸಲುವಾಗಿ ಆರೋಗ್ಯ ರಕ್ಷಾ ಸಮಿತಿಯು ಕ್ಲಿನಿಕಲ್ ಫೀ ನಿಂದ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಆ್ಯಂಬುಲೆನ್ಸ್ ಖರೀದಿಸಿದೆ. ಮಂಗಳೂರು ವೈದ್ಯಕೀಯ ರಿಲೀಫ್ ಸೊಸೈಟಿಯಿಂದ 8 ಲಕ್ಷ ರೂ. ವೆಚ್ಚದ ಆಂತರಿಕ ಎಡ್ವಾನ್ಸ್‌ಡ್ ಲೈಫ್ ಸೇವ್ ಮಾದರಿಯ ಸಲಕರಣೆಗಳನ್ನು ಇದಕ್ಕೆ ಅಳವಡಿಸಲಾಗಿದೆ.
< ನವೀಕೃತ ಸೆಲ್ ವಾರ್ಡ್: ಶಿಥಿಲಾವಸ್ಥೆ ಯಲ್ಲಿರುವ ಸೆಲ್ ವಾರ್ಡ್‌ಗೆ ಹೊಂದಿಕೊಂಡಿರುವ ಪಹರೆ ಕೊಠಡಿ ಇಕ್ಕಟ್ಟಾಗಿದ್ದು, 5 ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದೆ. ಇದನ್ನು ಕೆಎಂಸಿ ವತಿಯಿಂದ ನವೀಕರಿಸಲಾಗಿದೆ.
<
ಕ್ಷ-ಕಿರಣ ವಿಭಾಗ ಸ್ಥಾಪನೆ: ದಿನನಿತ್ಯ 400ಕ್ಕಿಂತಲೂ ಹೆಚ್ಚು ರೋಗಿಗಳ ಕ್ಷ-ಕಿರಣವನ್ನು ಇಲ್ಲಿ ತೆಗೆಯಲಾಗುತ್ತಿದೆ. ರೋಗಿಗಳಿಗೆ ಅನುಕೂಲವಾಗುವಂತೆ ಹೊರರೋಗಿ ವಿಭಾಗದಲ್ಲಿ 400 ಎಂಎ ಕ್ಷ-ಕಿರಣ ಯಂತ್ರವನ್ನು ಹಾಗೂ ಸಿಆರ್ ಡಿಜಿಟಲ್ ಕ್ಷ-ಕಿರಣ ಯಂತ್ರವನ್ನು ಅಳವಡಿಸಲಾಗಿದೆ.
<ಆಯುಷ್ ಸಂಯುಕ್ತ ಆಸ್ಪತ್ರೆ: 
ಆಯುಷ್ ವಿಭಾಗದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಆರಂಭಿಸುವ ಯೋಜನೆಯೊಂದಿಗೆ ಆಯುಷ್ ಇಲಾಖೆಯು ಆಯುರ್ವೇದ ಚಿಕಿತ್ಸೆಯನ್ನು ಕರ್ನಾಟಕ ಆಯುರ್ವೇದ ಕಾಲೇಜಿನ ಯೋಗ ಮತ್ತು ನ್ಯಾಚೋರೋಪತಿ ಚಿಕಿತ್ಸೆಯನ್ನು ಮೂಡುಬಿದಿರೆಯ ಆಳ್ವಾಸ್ ಹಾಗೂ ಫಾದರ್ ಮುಲ್ಲರ್ಸ್‌ನೊಂದಿಗೆ ಹೋಮಿಯೋಪತಿ ಪ್ರಾರಂಭಿಸಲಾಗಿದೆ. ಇದರಲ್ಲಿ ಆರ್ಯುವೇದ-ಪಂಚಕರ್ಮ, ಧಾರಾ, ಅಭ್ಯಂಗ, ಪ್ರಕೃತಿ ಚಿಕಿತ್ಸೆ-ಅಕ್ಯುಪಂಕ್ಚರ್, ಅಕ್ಯುಪ್ರೆಶರ್ ಯೋಗ, ಯುನಾನಿ-ಜಾಮ, ಹೋಮಿಯೋಪಥಿ ವಿಭಾಗಗಳು, ಆಯುರ್ವೇದದ ಹೊರರೋಗಿ ವಿಭಾಗದಲ್ಲಿ ನರ ರೋಗ, ಸ್ತ್ರೀರೋಗ, ಶಾಲಾಕ್ಯ, ಶಲ್ಯ, ಮಾನಸಿಕ ರೋಗ, ಹೋಮಿಯೋಪಥಿ ಹೊರರೋಗಿ ವಿಭಾಗದಲ್ಲಿ ಮಕ್ಕಳ ವಿಭಾಗ, ಸ್ತ್ರೀರೋಗ, ಜನರಲ್ ಮೆಡಿಸಿನ್ ಸೌಲಭ್ಯ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News