×
Ad

ಈ ವಿಷಯದಲ್ಲಿ ಸಂಸತ್ತಿನಲ್ಲಿ ಎಲ್ಲ ಪಕ್ಷದವರಲ್ಲಿ ಭಾರೀ ಒಗ್ಗಟ್ಟು

Update: 2016-12-09 11:58 IST

ಹೊಸದಿಲ್ಲಿ, ಡಿ.9: ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಸಕ್ತ ನಡೆಯುತ್ತಿದೆ. ಪ್ರತಿ ದಿನ ನೋಟು ಅಮಾನ್ಯ ವಿಚಾರದ ಮೇಲೆ ಸರಕಾರ ಹಾಗೂ ವಿಪಕ್ಷಗಳು ವಾದ ವಿವಾದಗಳಲ್ಲಿಯೇ ಕಾಲಹರಣ ಮಾಡುತ್ತಿವೆ.  ಈ ವಿವಾದಕ್ಕೆ ಕೊನೆಯಿಲ್ಲವೇನೋ ಎಂದೂ ಅನಿಸಲಾರಂಭಿಸಿದೆ. ಆದರೆ ಗುರುವಾರದ ಅಧಿವೇಶನದ  ವೇಳೆ ಒಂದು ವಿಚಾರದಲ್ಲಂತೂ ಇಲ್ಲಿಯ ತನಕ ಹಾವು ಮುಂಗುಸಿಯಂತೆ ಜಗಳವಾಡುತ್ತಿದ್ದ ಸದಸ್ಯರು ಒಂದಾಗಿ ಬಿಟ್ಟರು.  ಇದನ್ನು ಕಂಡು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮೊಗದಲ್ಲೂ ನಗು ಕಾಣಿಸಿತು. ಅಷ್ಟಕ್ಕೂ ಸದಸ್ಯರು ಒಗ್ಗಟ್ಟು ಪ್ರದರ್ಶಿಸಲು ಕಾರಣವಾದ ವಿಚಾರವೇನು ಗೊತ್ತೇ. ?

ಕಲಾಪದ ವೇಳೆ ಮಾತನಾಡಿದ ಸ್ಪೀಕರ್, ಸೋಮವಾರ ಈದ್-ಮಿಲಾದ್ ಆದ ಕಾರಣ ಕೆಲ ಸಂಸದರು ರಜೆ ಬೇಕೆಂದು ಹೇಳಿದ್ದಾರೆಂದು ತಿಳಿಸಿದರು. ಇದನ್ನು ಕೇಳಿದ್ದೇ ತಡ ಎಲ್ಲಾ ಸದಸ್ಯರೂ ಹೌದು ಎಂದು ಬಿಟ್ಟರು. ಅಬ್ಬಾ  ಸದಸ್ಯರ ಒಗ್ಗಟ್ಟು ನೋಡಿ, ಈ ಹಿಂದೆ ಕಲಾಪಕ್ಕೆ ತಡೆಯುಂಟು ಮಾಡುತ್ತಿದ್ದ ಅವರ ಜಗಳವನ್ನು ಕಂಡು ರೋಸಿ ಹೋಗಿ ಸಿಟ್ಟುಗೊಂಡಿದ್ದ ಸುಮಿತ್ರಾ ಮಹಾಜನ್ ಅವರ ಮೊಗದಲ್ಲಿ ಮಂದಹಾಸ ಮಿನುಗಿತ್ತು. ``ಅಂತೂ ರಜೆಗಾಗಿ ಎಲ್ಲರೂ ಸಿದ್ಧರಿದ್ದೀರಿ'' ಎಂದು ನಕ್ಕು ಬಿಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News