ಭೀಕರ ಅಪಘಾತ:13 ಶಿಕ್ಷಕರ ಸಾವು
Update: 2016-12-09 14:07 IST
ಫಜಿಲ್ಕಾ,ಡಿ.9: ಇಂದು ಬೆಳಿಗ್ಗೆ ಫಜಿಲ್ಕಾ-ಜಲಾಲಾಬಾದ್ ರಸ್ತೆಯಲ್ಲಿ ಶಾಲೆಯೊಂದರ ಶಿಕ್ಷಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 13 ಜನರು ದಾರುಣ ಸಾವನ್ನಪ್ಪಿದ್ದಾರೆ ಶಿಕ್ಷಕರು ಕರ್ತವ್ಯ ನಿರ್ವಹಿಸಲು ಶಾಲೆಗೆ ತೆರಳುತ್ತಿದ್ದರು. ದಟ್ಟವಾದ ಮಂಜಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಅವರು ಶಿಕ್ಷಕರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಮಂಜಿನಿಂದಾಗಿ ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಅಪಾಯಕ್ಕೆ ಸಿಲುಕದಂತೆ ಶಾಲೆಗಳ ಸಮಯವನ್ನು ಬದಲಿಸುವಂತೆ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.