ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್‌ಡಿ ದೇವೇಗೌಡ ಪುನರಾಯ್ಕೆ
Update: 2016-12-09 14:50 IST
ಬೆಂಗಳೂರು, ಡಿ.9: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.
ಇಂದು ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಮತ್ತೆ ದೇವೇಗೌಡ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡರು.
"ನನಗೆ ನಿಜಕ್ಕೂ ಅತ್ಯಂತ ಸಂಕಷ್ಟದ ಸಮಯ. 1990ರಿಂದ ರಾಷ್ಟ್ರದ ರಾಜಕಾರಣ ನೋಡುತ್ತಿರುವೆನು. ಪಕ್ಷದ ಹಿತದೃಷ್ಠಿಯಿಂದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ ” ಎಂದು ದೇವೇಗೌಡ ಹೇಳಿದರು.