×
Ad

ಬ್ಯಾಂಕ್ ಕ್ಯೂನಲ್ಲಿ ನಿಂತಿದ್ದ ನಿವೃತ್ತ ಸೈನಿಕನಿಗೆ ಪೊಲೀಸನಿಂದ ಕ್ರೂರ ಥಳಿತ

Update: 2016-12-09 15:28 IST

ಹೊಸದಿಲ್ಲಿ, ಡಿ. 9: ಬ್ಯಾಂಕ್ ಕ್ಯೂನಲ್ಲಿ ನಿಂತಿದ್ದ ನಿವೃತ್ತ ಸೈನಿಕರೊಬ್ಬರಿಗೆ ಪೊಲೀಸ್ ಸಿಬ್ಬಂದಿಯೊಬ್ಬ ಕ್ರೂರವಾಗಿ ಹೊಡೆದ ಘಟನೆ ಕರ್ನಾಟಕದ ಬಾಗಲಕೋಟೆಯಿಂದ ವರದಿಯಾಗಿದೆ. ಬ್ಯಾಂಕಿನ ಎದುರಿನಲ್ಲಿ ಕ್ಯೂ ನಿಂತಿದ್ದ 55ವರ್ಷ ವಯಸ್ಸಿನ ನಂದಪ್ಪರಿಗೆ ಪೊಲೀಸನಿಂದ ಇಂತಹ ದಾರುಣ ಅನುಭವವಾಗಿದೆ.

ಘಟನೆಯ ವೀಡಿಯೊ ದೃಶ್ಯಗಳು ಸೋಶಿಯಲ್ ಮೀಡಿಯಗಳಲ್ಲಿ ಹರಿದಾಡುತ್ತಿದೆ. ಕ್ಯೂನಲ್ಲಿ ನಿಂತಿದ್ದ ಇತರರು ಈ ವೀಡಿಯೊವನ್ನು ಚಿತ್ರಿಸಿ ಸೋಶಿಯಲ್ ಮೀಡಿಯದಲ್ಲಿ ಹಾಕಿದ್ದಾರೆ.

ಕ್ಯೂವಿನಲ್ಲಿ ನಿಂತಿದ್ದ ನಿವೃತ್ತ ಸೈನಿಕರನ್ನು ಬ್ಯಾಂಕ್‌ನ ಬಾಗಿಲ ಬಳಿ ತಡೆದು ಹಲವು ಬಾರಿ ಕ್ರೂರವಾಗಿ ಪೊಲೀಸ್ ಹೊಡೆದಿದ್ದಾನೆ. ನಂತರ ಕ್ಯೂವಿನಲ್ಲಿದ್ದ ಇತರರು ಪೊಲೀಸನನ್ನು ಸಮಾಧಾನಿಸಿದ್ದಾರೆ. ದೇಶದಲ್ಲಿ 1000,500ರೂಪಾಯಿ ನೋಟುಗಳು ಅಮಾನ್ಯಗೊಳಿಸಿದ ನಂತರ ಬ್ಯಾಂಕ್‌ಗಳ ಎಟಿಎಂಗಳ ಮುಂದೆ ಜನ ದಟ್ಟಣೆಯೇ ಸೇರುತ್ತಿದೆ. ಕರೆನ್ಸಿ ಬದಲಾಯಿಸಲು ಮತ್ತು ಅಕೌಂಟಿಗೆ ಹಾಕಲು ಜನರು ಪ್ರಯತ್ನಿಸುವ ವೇಳೆ ಎಪ್ಪತ್ತಕ್ಕೂ ಅಧಿಕ ಮಂದಿ ಈಗಾಗಲೇ ಮೃತರಾಗಿದ್ದಾರೆಂದು ವರದಿಯಾಗಿದೆ.

ಇತ್ತೀಚೆಗೆ ಮಣಿಪುರದ ಇಂಫಾಲದಲ್ಲಿ ಪೆನ್ಶನ್ ಪಡೆಯಲು ಹೆಡ್‌ಪೋಸ್ಟಾಫೀಸಿಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಕುಸಿದು ಬಿದ್ದು ಮೃತರಾಗಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News