ಅವಧಿ ಮೀರಿದ ಔಷಧಿ: ಪರಿಹಾರಕ್ಕೆ ಕೋರ್ಟ್ ಆದೇಶ

Update: 2016-12-09 17:55 GMT

ಉಡುಪಿ, ಡಿ.9: ಅವಧಿ ಮೀರಿದ ಔಷಧಿಯನ್ನು ನೀಡಿದ ಮಣಿಪಾಲದ ಇಎಸ್‌ಐ ಆಸ್ಪತ್ರೆಯ ವಿರುದ್ಧ ತೀರ್ಪು ನೀಡಿರುವ ಉಡುಪಿ ಗ್ರಾಹಕರ ನ್ಯಾಯಾಲಯ, ದೂರುದಾರರಿಗೆ ಐದು ಸಾವಿರ ರೂ. ಪರಿಹಾರ ಹಾಗೂ 3ಸಾವಿರ ರೂ. ಕೋರ್ಟ್ ವೆಚ್ಚವನ್ನು ನೀಡುವಂತೆ ಆದೇಶಿಸಿದೆ.

  2012ರ ಜು.28ರಂದು ಪರ್ಕಳದ ತಿಮ್ಮಪ್ಪ ಶೆಟ್ಟಿ ಹೊಟ್ಟೆನೋವಿಗಾಗಿ ಇಎಸ್‌ಐ ಆಸ್ಪತ್ರೆಯ ವೈದ್ಯರು ನೀಡಿದ ಸಲಹೆಯಂತೆ ಆಸ್ಪತ್ರೆಯ ಔಷದಾ ಲಯದಿಂದ ಮಾತ್ರೆಯನ್ನು ಪಡೆದು ಸೇವಿಸಿದ್ದರು. ಅವಧಿ ಮೀರಿದ ಈ ಮಾತ್ರೆಯನ್ನು ತಿಂದ ಪರಿಣಾಮ ತಿಮ್ಮಪ್ಪ ಶೆಟ್ಟಿಗೆ ಆರೋಗ್ಯದಲ್ಲಿ ವಿಪರೀತ ತೊಂದರೆ ಕಾಣಿಸಿಕೊಂಡಿತು.

ಇದರ ವಿರುದ್ಧ ತಿಮ್ಮಪ್ಪ ಶೆಟ್ಟಿ ಉಡುಪಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿ ಪರಿಹಾರ ನೀಡುವಂತೆ ಕೋರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ತಿಮ್ಮಪ್ಪ ಶೆಟ್ಟಿ ಅವರಿಗೆ ಪರಿಹಾರ ನೀಡುವಂತೆ 2016ರ ನ.3ರಂದು ಆದೇಶ ನೀಡಿತು. ‘ಈ ತೀರ್ಪಿನ ಬಗ್ಗೆ ನನಗೆ ಸಮಧಾನವಿಲ್ಲ. ಆದುದರಿಂದ ರಾಜ್ಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಹೆಚ್ಚುವರಿ ಪರಿಹಾರ ಹಾಗೂ ವೈದ್ಯರನ್ನು ವಜಾಗೊಳಿಸುವಂತೆ ಕೋರಲಾ ಗುವುದು ಎಂದು ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News