ಸಾಸ್ತಾನ: ಪವಿತ್ರ ಶಿಲುಬೆಗೆ ಅದ್ದೂರಿ ಸ್ವಾಗತ

Update: 2016-12-09 17:59 GMT

ಬ್ರಹ್ಮಾವರ, ಡಿ.9: ಕಥೊಲಿಕ ಕ್ರೈಸ್ತ ಸಮುದಾಯದ ರಾಷ್ಟ್ರೀಯ ಯುವಜನ ಸಮ್ಮೇಳನದ ಸಿದ್ಧತೆ ಪ್ರಯುಕ್ತ ಉಡುಪಿ ಧರ್ಮ ಪ್ರಾಂತದಾದ್ಯಂತ ಸಂಚರಿಸುತ್ತಿರುವ ಪವಿತ್ರ ಶಿಲುಬೆ ಗುರುವಾರ ಸಾಸ್ತಾನ ಸಂತ ಅಂತೋನಿ ಧರ್ಮಕೇಂದ್ರಕ್ಕೆ ಆಗಮಿಸಿತು.

ತ್ರಾಸಿ ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ವಂ.ಚಾರ್ಲ್ಸ್ ಲೂವಿಸ್ ಅವರಿಂದ ಸಾಸ್ತಾನ ಧರ್ಮಕೇಂದ್ರದ ಧರ್ಮಗುರು ವಂ.ಜಾನ್ ವಾಲ್ಟರ್ ಮೆಂಡೋನ್ಸಾ ಪವಿತ್ರ ಶಿಲುಬೆಯನ್ನು ಸ್ವೀಕರಿಸಿ ಸಾಸ್ತಾನ ಕೇಂದ್ರಕ್ಕೆ ತಂದರು.

ಸಾಸ್ತಾನ ಧರ್ಮಕೇಂದ್ರದ ಮುಖ್ಯ ದ್ವಾರದ ಬಳಿ ಪವಿತ್ರ ಶಿಲುಬೆಯನ್ನು ಸ್ವಾಗತಿಸಲಾಯಿತು. ಬಳಿಕ ಪವಿತ್ರ ಶಿಲುಬೆಯನ್ನು ಮೆರವಣಿಗೆಯ ಮೂಲಕ ಚರ್ಚಿಗೆ ಕೊಂಡೊಯ್ದು ಪ್ರಾರ್ಥನಾ ವಿಧಿಯನ್ನು ನೆರವೇರಿಸಲಾಯಿತು.

 ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜ ಪವಿತ್ರ ಶಿಲುಬೆಯ ಗೌರವ ಹಾಗೂ ಮಹತ್ವದ ಕುರಿತು ಪ್ರವಚನ ನೀಡಿದ ಬಳಿಕ ತೈಝೆ ಪ್ರಾರ್ಥನಾ ವಿಧಿಯನ್ನು ನೇರವೇರಿಸಿದರು.

ಶುಕ್ರವಾರ ಬೆಳಗ್ಗಿನಿಂದ ಸಂಜೆಯ ತನಕ ಪವಿತ್ರ ಶಿಲುಬೆಯ ಆರಾಧನೆಯನ್ನು ನೇರ ವೇರಿಸಿ ಸಂಜೆ ಪವಿತ್ರ ಬಲಿಪೂಜೆಯೊಂದಿಗೆ ಶಿಲುಬೆಯನ್ನು ಬಾರ್ಕೂರು ಧರ್ಮಕೇಂದ್ರಕ್ಕೆ ಬೀಳ್ಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News