‘ಸೌಹಾರ್ದ ಕ್ರಿಸ್‌ಮಸ್-2016’ ಕಾರ್ಯಕ್ರಮ

Update: 2016-12-10 15:10 GMT

ಮಂಗಳೂರು, ಡಿ. 10: ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್, ಮಂಗಳೂರು ಡಿಯೋಸಿನ್ ಇಮ್ಯಾನುವೆಲ್ ಕಮಿಷನ್, ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನಲ್ ಸೊಸೈಟಿ, ಚಾರ್ ಇನ್ ಕ್ರಿಶ್ಚಿಯಾನಿಟಿ, ಕರ್ನಾಟಕ ಮಿಷನ್ ನೆಟ್‌ವರ್ಕ್, ವೆಸ್ಟರ್ನ್ ರೆನ್‌ನ ಆಲ್ ಕರ್ನಾಟಕ ಯುನೈಡೆಡ್ ಕ್ರಿಶ್ಚಿಯನ್ ಫಾರಂ ಫಾರ್ ಹ್ಯೂಮನ್ ರೈಟ್ಸ್ ಸಹಯೋಗದಲ್ಲಿ ಕ್ರಿಸ್‌ಮಸ್ ಪೂರ್ವಭಾವಿಯಾಗಿ ‘ಸೌಹಾರ್ದ ಕ್ರಿಸ್‌ಮಸ್-2016’ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಕ್ರಿಸ್‌ಮಸ್ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸುವ ಮೂಲಕ ಇತರ ಸಮುದಾಯಗಳಿಗೂ ಮಾದರಿಯಾಗಬೇಕು. ಕ್ರಿಸ್‌ಮಸ್ ಹಬ್ಬದ ಸಂಭ್ರಮ ವರ್ಷದುದ್ದಕ್ಕೂ ಎಲ್ಲೆಡೆ ನೆಲೆಸಲಿ ಎಂದು ಹಾರೈಸಿದರು.

ಕ್ರಿಸ್‌ಮಸ್ ಆಚರಣೆಯ ಗೀತೆಗಳು, ಯೇಸುವಿನ ಜನನ ಸಂದೇಶ ಸಾರುವ ಗೀತ ರೂಪಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕರ್ನಾಟಕ ಸದರ್ನ್ ಡಯಾಸೀಸ್ ಸಿಎಸ್‌ಐ ಬಿಷಪ್ ಮೋಹನ್ ಮನೋರಾಜ್, ಬೆಳ್ತಂಗಡಿ ಸಿರಿಯೋ ಮಲಬಾರ್ ಕೆಥೋಲಿಕ್ ಡಯಾಸೀಸ್‌ನ ಬಿಷಪ್ ಡಾ. ಲಾರೆನ್ಸ್ ಮುಕ್ಕೋಝಿ, ಪುತ್ತೂರು ಸಿರಿಯೋ ಮಲಯಂಕರ ಕಥೋಲಿಕ್ ಡಯಾಸೀಸ್‌ನ ಡಾ. ಗೀವಾರ್ಗಿಸ್ ಮಾರ್ ಡಿವೋನೋಸಿಸ್, ಬ್ರಹ್ಮಾವರ ಮಲಯಂಕರ ಅರ್ಥೋಡೆಕ್ಸ್ ಸಿರಿಯನ್ ಡಯಾಸೀಸ್‌ನ ಗ್ರೇಸ್ ಯೂಕೂಬ್ ಮಾರ್ ಇಲಿಯಾಸ್, ಬೆಥನಿಯ ಭಗಿನಿ ಮಾರಿಯೇಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News