×
Ad

ಇಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಬಿಡುಗಡೆ

Update: 2016-12-10 21:38 IST

ಮಂಗಳೂರು, ಡಿ. 10: ಪರಿಸರ ಸ್ನೇಹಿ ಇಲೆಕ್ಟ್ರಿಕ್ ಸೈಕಲ್ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಹಂಸಮಾರ್ಟ್ ಶೋರೂಂನಲ್ಲಿ ಶನಿವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಶಾಸಕ ಜೆ.ಆರ್.ಲೋಬೊ ಅವರು ಇ-ಸೈಕಲ್‌ನು ಬಿಡುಗಡೆಗೊಳಿಸಿದರು. ಸುಮಾರು 35 ಸಾವಿರ ರೂ. ಬೆಲೆಬಾಳುವ ಈ ಸೈಕ್‌ಲ್‌ನ್ನು ಲಿಥಿಯಂ ಬ್ಯಾಟರಿಯಿಂದ ಚಲಾಯಿಸಬಹುದು.ಮಾತ್ರವಲ್ಲದೆ ಪೆಡಲಿಂಗ್ ಸೌಲಭ್ಯವೂ ಇದೆ. ಪ್ರತಿ ಕಿ.ಮೀ.ಗೆ ಕೇವಲ 20 ಪೈಸೆಯಷ್ಠು ವೆಚ್ಚಬರಲಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ, 30 ಕಿ.ಮೀ.ನಷ್ಟು ಪ್ರಯಾಣಿಸಬಹುದು. ಈ ಲಿಥಿಯಂ ಬ್ಯಾಟರಿ ಸುಮಾರು 30 ಸಾವಿರ ಕಿ.ಮೀ.ನಷ್ಟು ಬಾಳಿಕೆ ಬರಲಿದೆ. ಒಂದು ಬ್ಯಾಟರಿ ಐದು ವರ್ಷಗಳ ಕಾಲ ಬಳಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News