ಭಿನ್ನ ರಕ್ತದ ಗುಂಪಿನ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ

Update: 2016-12-10 17:21 GMT

ಮಣಿಪಾಲ, ಡಿ.10: ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ರಕ್ತದ ಗುಂಪಿನ ಪ್ರತಿಬಂಧವನ್ನೂ ಮೀರಿ ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಕೃಷ್ಣ ದೇವಾಡಿಗ ಅವರು ಕೆಲವು ಸಮಯದಿಂದ ಮೂತ್ರಪಿಂಡ ವೈಫಲ್ಯ ದಿಂದಬಳಲುತ್ತಿದ್ದರು. ವೈದ್ಯರು ಅವರಿಗೆ ಮೂತ್ರಪಿಂಡ ಕಸಿ ಮಾಡಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಅವರ ಪತ್ನಿ ಪ್ರೇಮಾ ದೇವಾಡಿಗ, ಮಗಳು ಚೈತ್ರಾ ಅವರ ಉತ್ತೇಜನದ ಮೇರೆಗೆ ತಮ್ಮ ಪತಿಗೆ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದಿದ್ದರು. ಕೃಷ್ಣ ದೇವಾಡಿಗ ಅವರ ರಕ್ತದ ಗುಂಪು ಓ ಪಾಸಿಟಿವ್ ಆಗಿತ್ತು. ಅವರಿಗೆ ಬೇರೆ ಯಾರೂ ಸ್ವಯಂ-ಪ್ರೇರಿತ ದಾನಿಗಳು ಸಿಕ್ಕಿರಲಿಲ್ಲ. ಈ ರೀತಿ ರೋಗಿ ಮತ್ತು ದಾನಿಯ ರಕ್ತದ ಗುಂಪುಗಳು ಬೇರೆ ಬೇರೆ ಇದ್ದಾಗ, ರಕ್ತದ ಗುಂಪಿನಲ್ಲಿರುವ ಕೆಲವು ಪ್ರತಿಕ್ರಿಯಾತ್ಮಕ ಅಂಶಗಳು ಅಥವಾ ಪ್ರತಿಕಾಯ ಗಳನ್ನು ಶುದ್ಧೀಕರಿಸುವ ವಿಶೇಷ ಚಿಕಿತ್ಸೆಗಳ ನಂತರವೆ ಕಸಿ ಚಿಕಿತ್ಸೆ ನಡೆಯುವುದು ಸಾಧ್ಯವಾಗುತ್ತದೆ. ಇದುವರೆಗೆ ಇಂತಹ ಸೌಲಭ್ಯ ದೊಡ್ಡ ನಗರದಲ್ಲಿನ ವಿಶೇಷ ಆಸ್ಪತ್ರೆಗಳಲ್ಲಿ ದೊರೆಯುತ್ತಿದ್ದು, ಚಿಕಿತ್ಸೆ ಬಹಳ ದುಬಾರಿಯಾಗಿರುತ್ತದೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ ಅವರ ಮಾರ್ಗರ್ಶನದಲ್ಲಿ, ಕೃಷ ದೇವಾಡಿಗ ಅವರ ಶರೀರದಲ್ಲಿದ್ದ ಪ್ರತಿಕಾಯವನ್ನು ಪ್ಲಾಸ್ಮಾಫೆರೆಸಿಸ್ ಎಂಬ ತಂತ್ರಜ್ಞಾನದ ಮೂಲಕ ತೆಗೆದು ಹಾಕಲಾಯಿತು. ಈ ರೀತಿ ಆರಂಭಿಕ ವಿಶೇಷ ತಯಾರಿಗಳೊಂದಿಗೆ, ಕಡಿಮೆ ವೆಚ್ಚದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲು ಕೆಎಂಸಿ ವಿಶೇಷ ಕಾಳಜಿ ಮತ್ತು ವ್ಯವಸ್ಥೆಯನ್ನು ಒದಗಿಸಿತು.

ಮೂತ್ರಪಿಂಡ ಕಸಿಯ ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ನ.28ರಂದು ನಡೆಸಲಾ ಯಿತು. ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಚಾವ್ಲಾ, ಕೆಎಂಸಿಯ ಉಪವೈದ್ಯಕೀಯ ಅಧೀಕ್ಷಕರು ಹಾಗೂ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆದ ಡಾ.ಪದ್ಮರಾಜ್ ಹೆಗ್ಡೆ, ಡಾ. ಜೋಸೆಫ್ ಥೋಮಸ್ ಮತ್ತು ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಪ್ರಭು, ಡಾ.ಶಂಕರ್ ಪ್ರಸಾದ್ ಹಾಗೂ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಅನಿತಾ ಶೆಣೈ, ಡಾ.ಅಮೃತ ರಾವ್ ಮತ್ತು ಡಾ. ಂಶೀಧರ್ ಚಿಕಿತ್ಸಾ ತಂಡದಲ್ಲಿದ್ದರು.

ರೋಗಿಯ ನಿರ್ವಹಣೆಯಲ್ಲಿ ರಕ್ತಪೂರಣದ ಪಾತ್ರ ವಿವರಿಸಿದ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ. ಶಮೀ ಶಾಸ್ತ್ರಿ, ಪ್ರತಿದಿನ ರಕ್ತಪೂರಣಕ್ಕೆ ಮೊದಲು ಪ್ರತಿಕಾಯಗಳ ಮಟ್ಟವನ್ನು ಗಮನಿಸಲಾಗುತ್ತಿತ್ತು. ಪ್ರತಿಕಾಯಗಳನ್ನು ಸುರಕ್ಷತಾ ಮಟ್ಟಕ್ಕೆ ತರುವುದಕ್ಕಾಗಿ, ರಕತಿ ಪೂರಣಕ್ಕೆ ಮೊದಲು ಪ್ಲಾಸ್ಮಾ ವಿನಿಮಯದ ಮೂರು ಚಿಕಿತ್ಸಾ ಕ್ರಮಗಳನ್ನು ಮತ್ತು ನಂತರ ಎರಡು ಚಿಕಿತ್ಸಾ ಕ್ರಮಗಳನ್ನು ನಡೆಸಲಾಗಿತ್ತು ಎಂದರು.

ಮಣಿಪಾಲ ಕೆಎಂಸಿ ತಂಡ ಯಶಸ್ವೀ ಕಸಿಯೊಂದಿಗೆ ಮೂತ್ರಪಿಂಡ ಕಸಿಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ರಕ್ತದ ಗುಂಪು ಹೊಂದಾಣಿಕೆ ಆಗದಿದ್ದರೂ ಸಹ, ಕಸಿ ಮಾಡಲಾದ ಮೂತ್ರಪಿಂಡವು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಮತುತಿ ಅಡ್ಡಹೊಂದಾಣಿಕೆ (ಕ್ರಾಸ್-ಮ್ಯಾಚಿಂಗ್) ಪ್ರಕ್ರಿಯೆ ಇದೀಗ ನಿಜವಾಗಿದೆ. ಇದು ಅನೇಕ ರೋಗಿಗಳಲ್ಲಿ ಭರವಸೆಯನ್ನು ಮೂಡಿಸಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಮುಖ್ಯ ನಿರ್ವಹಣಾಧಿಕಾರಿ ಡಾ.(ಕರ್ನಲ್) ಎಂ. ದಯಾನಂದ ಹೇಳಿದ್ದಾರೆ.

ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮೂತ್ರಪಿಂಡ ಕಸಿ ಎನ್ನುವುದು ಅತ್ಯುತ್ತಮ ಚಿಕಿತ್ಸಾ ಆಯ್ಕೆ. ಭಾರತದಲ್ಲಿ ಸಾಮಾನ್ಯವಾಗಿ ರಕ್ತದ ಗುಂಪು ಹೊಂದಾಣಿಕೆ ಆಗುವ ದಾನಿ ಸಿಗದೆ ಹೋದರೆ ಆ ರೋಗಿಯನ್ನು ಕಸಿಯ ಪ್ರಕ್ರಿಯೆಯಿಂದ ಕೈಬಿಡಲಾಗುತ್ತದೆ. ಹೊಂದಾಣಿಕೆ ಆಗುವ ದಾನಿಗಳು ದೊರೆಯದ ರೋಗಿಗಳಿಗೆ ಕಸಿ ಮಾತ್ರವೇ ಏಕಮಾತ್ರ ಚಿಕಿತ್ಸಾ ಆಯ್ಕೆ ಆಗಿದೆ. ಕೆಲವು ವರ್ಷಗಳ ಹಿಂದೆ, ಎರಡೂ ಮೂತ್ರಪಿಂಡಗಳು ಶಾಶ್ವತವಾಗಿ ವಿಫಲವಾಗಿರುವ ರೋಗಿಗೆ, ಸಮಾನ ರಕ್ತದ ಗುಂಪಿನ ದಾನಿ ಸಿಕ್ಕರೆ ಮಾತ್ರ ಮೂತ್ರಪಿಂಡ ಕಸಿ ಮಾಡಲಾಗುತ್ತಿತ್ತು. ಬೇರೆ ರಕ್ತದ ಗುಂಪಿಗೆ ಸೇರಿದ ರೋಗಿಯಿಂದ ಪಡೆದ ಮೂತ್ರಪಿಂಡ ಕಸಿಯನ್ನು ರೋಗಿಯ ಶರೀರವು ತಿರಸ್ಕರಿಸುವ ಸಾಧ್ಯತೆ ಹೆಚ್ಚು. ರಕ್ತದ ಗುಂಪುಗಳು ಒಂದೇ ಆಗಿದ್ದರೆ ತಿರಸ್ಕೃತವಾಗುವ ಸಾಧ್ಯತೆ ಕಡಿಮೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News