ಬದಲಿ ವ್ಯವಸ್ಥೆ ಇಲ್ಲದೇ ನೋಟ್ ರದ್ದು, ಬಡವರಿಗೆ ತೀರದ ಬವಣೆ : ಹೆಬ್ರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಹೆಬ್ರಿ, ಡಿ.10: ಪ್ರಧಾನಿ ಮೋದಿಗೆ ಕಿವಿ ಕೇಳುವುದಿಲ್ಲ, ಜನರ ಕಷ್ಟಗಳು ಅರ್ಥವಾಗುವುದಿಲ್ಲ, ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಾಕುವುದಾಗಿ ಹೇಳಿ ನಾಟಕ ಮಾಡಿದರು. ಈಗ ಏನು ಮಾಡಲಾಗದೇ ದೇಶದ ಜನರ ಮೇಲೆಯೇ ಸವಾರಿ ಮಾಡಿ ಜನರನ್ನು ಕಷ್ಟದಲ್ಲಿ ಬ್ಯಾಂಕಿನ ಎದುರು ನಿಲ್ಲಿಸಿ, ತಾನು ದೇಶ,ವಿದೇಶ ಸುತ್ತುತಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆಗೆ ಉತ್ತರಿಸಲು ಮೋದಿ ಸಿಗುತ್ತಿಲ್ಲ. ಇದು ಮೋದಿ ದೇಶಕ್ಕೆ ನೀಡಿ ‘ಅಚ್ಛೇ ದಿನ್’ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಗೋಪಾಲ ಂಡಾರಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ರಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಕೇಂದ್ರ ಸರಕಾರದ ನೋಟು ರದ್ದತಿ ವಿರುದ್ಧ ನಡೆದ ಪ್ರತಿಟನಾ ಸೆಯಲ್ಲಿಾಗವಹಿಸಿ ಅವರು ಮಾತನಾಡುತಿದ್ದರು. ಈಗ ನಿಜವಾಗಿ ಕಪ್ಪುಹಣ ಇರುವುದು ಬಿಜೆಪಿಯವರಲ್ಲಿ. ಬ್ಯಾಂಕಿನಲ್ಲಿ ಯಾರೂ ಬಡವರು ಸಾಲು ನಿಲ್ಲುತ್ತಿಲ್ಲ. ಪಾಪದ ಜನರ ಖಾತೆಗೆ ನಮ್ಮೂರಿನ ಬಿಜೆಪಿಯ ಕಪ್ಪುಕುಳ ಲಕ್ಷಾಂತರ ರೂ. ಜಮೆ ಮಾಡಿದ್ದಾರೆ. ಇದರಿಂದ ಬಡವರ ಬಿಪಿಎಲ್ ಕಾರ್ಡುಗಳು ರದ್ದಾಗುವ ಅಪಾಯದಲ್ಲಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಬ್ಯಾಂಕ್‌ಗಳನ್ನು ಮೋದಿ ತನಿಖೆ ನಡೆಸಲಿ ಆಗ ಸತ್ಯಾಂಶ ಹೊರಬರುತ್ತದೆ ಎಂದವರು ನುಡಿದರು.
ಬಡವರಿಗೆ ಬದುಕು ಕಟ್ಟಿಕೊಟ್ಟ ಕಾಂಗ್ರೆಸ್ ಎಂದೂ ಜನತೆಗೆ ತೊಂದರೆ ಮಾಡಿಲ್ಲ. ಮೋದಿಯಿಂದಾಗಿ ಬಡವರು ಬದುಕುವ ಸ್ಥಿತಿಯಲ್ಲಿ ಇಲ್ಲ. ಇದು ಬಿಜೆಪಿಗೂ ಗೊತ್ತಿದೆ. ಆದರೆ ಅವರಿಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಭಂಡಾರಿ ಲೇವಡಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬಡವರು ಬ್ಯಾಂಕಿನಲ್ಲಿ ಸಾಲು ನಿಂತಿದ್ದಾರೆ. ಶ್ರೀಮಂತರು ಚೆಕ್ಕಿನಲ್ಲಿ ಹಣ ಪಡೆದು ದರ್ಬಾರು ಮಾಡುತಿದ್ದಾರೆ. ಇದು ಬಿಜೆಪಿ ದೊಡ್ಡ ಕುಳಗಳನ್ನು ಮತ್ತು ಬಿಜೆಪಿಗೆ ಹಣಕಾಸಿನ ನೆರವು ನೀಡುವವರನ್ನು ರಕ್ಷಿಸಲು ನೋಟ್ ಬ್ಯಾನ್ ಹೆಸರಿನಲ್ಲಿ ಮಾಡಿರುವ ಬಹುದೊಡ್ಡ ನಾಟಕ. ಅಲ್ಲದೇ ಬ್ಯಾಂಕಿನ ಅಧಿಕಾರಿಗಳು ಸಾಕಷ್ಟು ಬಿಜೆಪಿ ಕಪ್ಪುಕುಳಗಳನ್ನು ರಕ್ಷಿಸಿದ್ದಾರೆ ಎಂದರು.
ವಿದೇಶದ ಕಪ್ಪುಹಣ ತರಲು ಆಗಿಲ್ಲ. ದೇಶ ಹಲವು ಸಮಸ್ಯೆಯಿಂದ ನಲುಗುತ್ತಿದೆ. ಮೋದಿ ಮತ್ತು ಬಿಜೆಪಿ ವಿರುದ್ಧ ಜನ ಬೇಸತ್ತಿದ್ದಾರೆ ಎಂದು ತಿಳಿದಾಗ ಜನರನ್ನು ಒಂದೇ ಸಲ ಬೇರೆಡೆ ಸೆಳೆದು ದಾರಿ ತಪ್ಪಿಸಿ ರಾತೋರಾತ್ರಿ ಹೀರೋ ಆಗಲು ಹೊರಟು ನೋಟ್ ಬ್ಯಾನ್ ಮಾಡಿದ್ದಾರೆ. ಭಾರತದಲ್ಲಿ ಕ್ಯಾಶ್‌ಲೆಸ್ ಅಂದರೆ ಅದು ಮೈಂಡ್ ಲೆಸ್ ನಿರ್ಧಾರ. ಕೆಲವೇ ದಿನಗಳಲ್ಲಿ ಬಿಜೆಪಿಯವರೂ ಮೋದಿ ವಿರುದ್ಧ ದಂಗೆ ಏಳುತ್ತಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ ಹೇಳಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಎಂ.ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಂಚಾಯಿತಿ ಅಧ್ಯಕ್ಷರಾದ ಚಾರದ ಸಂದೀಪ್, ಮುದ್ರಾಡಿಯ ಶಶಿಕಲಾ ಪೂಜಾರಿ, ಚಾರದ ಉಪಾಧ್ಯಕ್ಷೆ ರೇಶ್ಮಾ, ಪ್ರಮುಖರಾದ ರಾಘವ ದೇವಾಡಿಗ, ಜಯಕರ ಪೂಜಾರಿ, ಬೋಜ ಪೂಜಾರಿ, ಹೆಚ್.ಬಿ.ಸುರೇಶ್, ಕೆಂಪನಾಯ್ಕಾ ಸಂತೋಷ ಕುಮಾರ್ ಶೆಟ್ಟಿ, ಯಶೋಧ ಶೆಟ್ಟಿ, ಪಕ್ಷದ ವಿವಿಧ ಘಟಕದ ಪ್ರಮುಖರು ಉಸ್ಥಿತರಿದ್ದರು.
ಸದಾನಂದ ಗೌಡರದ್ದು ಕಪ್ಪು ಹಣವೇ?
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಹಣವನ್ನು ಮೊನ್ನೆ ಆಸ್ಪತ್ರೆಯಲ್ಲಿ ಪಡೆಯಲಿಲ್ಲ. ಹಾಗಾದರೆ ಅದು ಕಪ್ಪು ಹಣವೇ, ಅಲ್ಲದಿದ್ದರೆ ಅವರ ಹಣವನ್ನು ಏಕೆ ಪಡೆಯಲಿಲ್ಲ ಎಂದು ತನಿಖೆ ನಡೆಯಲಿ. ಹೀಗಾದರೆ ಇನ್ನು ಬಡವರ ಸ್ಥಿತಿ ಏನು ಎಂದು ಗೋಪಾಲ ಭಂಡಾರಿ ಪ್ರಶ್ನಿಸಿದರು.