ಕಾರ್ಮಿಕರ ಹಣ ಲೂಟಿ: ಪರಾರಿ
Update: 2016-12-10 23:14 IST
ಮಂಗಳೂರು, ಡಿ.10: ಉತ್ತರ ಭಾರತದ ಕಾರ್ಮಿಕನೋರ್ವನ ಬಳಿಯಿಂದ ಹಣವನ್ನು ಕಸಿದು ಅಪರಿಚಿತನೋರ್ವ ಪರಾರಿಯಾಗಿರುವ ಘಟನೆ ಪಣಂಬೂರು ಪೊಲೀಸಂ ಠಾಣಾ ವ್ಯಾಪ್ತಿಯ ಅಂಗಾರಗುಂಡಿಯಲ್ಲಿ ಇಂದು ರಾತ್ರಿ ನಡೆದಿದೆ.
ಅಂಗರಗುಂಡಿಯ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉತ್ತರ ಭಾರತದ ಕಾರ್ಮಿಕನೋರ್ವನನ್ನು ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತನೋರ್ವ ಆತನನ್ನು ತಡೆದು ಹಣವನ್ನು ಲೂಟಿ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತ ಬೊಬ್ಬೆ ಹಾಕಿದಾಗ ಅಪರಿಚಿತ ವ್ಯಕ್ತಿ ಬೈಕ್‌ನ್ನು ಬಿಟ್ಟು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.