×
Ad

ಅಮೃತ ಮಹೋತ್ಸವ

Update: 2016-12-10 23:34 IST

ಉಡುಪಿ, ಡಿ.10: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಕಟ್ಟಡದ ಅಮೃತ ಮಹೋತ್ಸವದ ಪ್ರಯುಕ್ತ ಧಾರ್ಮಿಕ ವ್ಯಕ್ತಿಗಳ ದಿನವನ್ನು ಶನಿವಾರ ಆಚರಿಸಲಾಯಿತು.

ಉಡುಪಿ ಧರ್ಮಪ್ರಾಂತದ ಧಾರ್ಮಿಕ ವ್ಯಕ್ತಿಗಳ ಸಭೆಯ ಎಪಿಸ್ಕೋಪಲ್ ವಿಕಾರ್ ವಂ.ರೋಶನ್ ಮಿನೇಜಸ್ ಪವಿತ್ರ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ಈ ವೇಳೆ ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್ ಪ್ರವಚನ ನೀಡಿದರು. ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಪ್ರೊ.ಹಿಲ್ಡಾ ರೊಡ್ರಿಗಸ್ ಧರ್ಮಗುರುಗಳು ಹಾಗೂ ಧರ್ಮಭಗಿನಿಯರನ್ನು ಅಭಿನಂದಿಸಿದರು. ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ರೆಕ್ಟರ್ ವಂ.ಸ್ಟ್ಯಾನಿ ಬಿ ಲೋಬೊ, ಸಹಾಯಕ ಧರ್ಮಗುರುಗಳಾದ ವಂ.ಅನಿಲ್ ಡಿಸಿಲ್ವಾ, ರೋಲ್ವಿನ್ ಅರಾನ್ಹಾ, ಹಿರಿಯ ಧರ್ಮಗುರುಗಳಾದ ವಂ.ಜೋರ್ಜ್ ಲೂವಿಸ್, ವಂ.ವಿಲ್ಫ್ರೇಡ್ ಲೂವಿಸ್, ವಂ.ಸಂತೋಷ್ ಡಿಸೋಜ, ವಂ.ರೋನ್ಸನ್, ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News