×
Ad

ಉಳ್ಳಾಲ: ಡಿ.11ರಂದು ಇಸ್ಲಾಮಿ ಕುಟುಂಬ ಸಂಗಮ

Update: 2016-12-10 23:35 IST

 ಮಂಗಳೂರು, ಡಿ.10: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ವತಿಯಿಂದ ಇಸ್ಲಾಮಿ ಕುಟುಂಬ ಸಂಗಮ ಕಾರ್ಯಕ್ರಮವು ಡಿ.11ರಂದು ಉಳ್ಳಾಲದ ಸಲ್ ಸಬೀಲ್ ಮಸೀದಿ ಗ್ರೌಂಡ್‌ನಲ್ಲಿ ನಡೆಯಲಿದೆ.

ಅಂದು ಸಂಜೆ 3:30ರಿಂದ ರಾತ್ರಿ 8ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹದಿಯತುಲ್ಲಾಹ್ ಸಲಫಿ ‘ಇಸ್ಲಾಮಿ ಕುಟುಂಬ’ ಎಂಬ ವಿಷಯದಲ್ಲಿ ಪ್ರವಚನ ನೀಡುವರು. ಇದೇ ವೇಳೆ ಇತ್ತೀಚೆಗೆ ಆಯೋಜಿಸಲಾಗಿದ್ದ ಕುರ್‌ಆನ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಬೆ.10ರಿಂದ ಸಂಜೆ 4ರವರೆಗೆ ಉಳ್ಳಾಲ ಪೇಟೆ ಪಂಚಾಯತ್ ಗ್ರೌಂಡ್‌ನಲ್ಲಿ ಇಸ್ಲಾಮಿ ಸಂದೇಶಗಳ ಪ್ಯಾನಲ್ ಪ್ರದರ್ಶನ ನಡೆಯಲಿದೆ. ಅ.2:30ರಿಂದ 3:30ರವರೆಗೆ ಮಹಿಳೆಯರಿಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಬೂ ಬಿಲಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News