ವಸತಿ ಯೋಜನೆಗೆ ನೂತನ ಆ್ಯಪ್ ಬಿಡುಗಡೆ: ಸಚಿವ ಕೃಷ್ಣಪ್ಪ

Update: 2016-12-10 18:15 GMT

ಸುಳ್ಯ, ಡಿ.10: ಬಸವ ವಸತಿ, ಅಂಬೇಡ್ಕರ್, ಇಂದಿರಾ ಆವಾಸ್ ಯೋಜನೆಗಳಿಗೆ ಜಿಪಿಎಸ್ ಫೋಟೊ ದಾಖಲೆ ನೀಡಲು ನೂತನ ಆ್ಯಪ್‌ನ್ನು ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ಕೃಷ್ಣಪ್ಪ ತಿಳಿಸಿದ್ದಾರೆ.

ಸುಳ್ಯದಲ್ಲಿ ನಡೆದ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಮನೆಯ ನಾಲ್ಕು ಹಂತದ ಫೋಟೊಗಳನ್ನು ನೇರವಾಗಿ ಫಲಾನುಭವಿಗಳೇ ನಿಗಮಕ್ಕೆ ಕಳುಹಿಸುವ ವ್ಯವಸ್ಥೆ ಈ ಆ್ಯಪ್‌ನಲ್ಲಿದೆ. ಈ ವರ್ಷ 6 ಲಕ್ಷ ಮನೆಗಳನ್ನು ನೀಡುವ ಗುರಿ ಇದೆ. ಪ್ರತಿ ಮನೆಗೆ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಅಲ್ಲದೆ ನರೇಗಾದಲ್ಲಿ 2 ಸಾವಿರ ರೂ. ಶೌಚಾಲಯಕ್ಕೆ 15 ಸಾವಿರ ರೂ. ನೀಡಲಾಗುತ್ತದೆ ಎಂದವರು ಹೇಳಿದರು.

ಸಾಮಾಜಿಕ ಆರ್ಥಿಕ ಗಣತಿಯ ಮಾಹಿತಿಯನ್ನು ಆಧರಿಸಿ ಗ್ರಾಮವಾರು ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಯಾರ ಮರ್ಜಿಗೂ ಒಳಗಾಗುವುದಿಲ್ಲ ಎಂದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಪ್ರ.ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಟಿ.ಎಂ.ಶಹೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News