ಸುಬ್ರಹ್ಮಣ್ಯ: ‘ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ’ಗೆ ಚಾಲನೆ

Update: 2016-12-10 18:18 GMT

ಸುಬ್ರಹ್ಮಣ್ಯ, ಡಿ.10: ಮನುಷ್ಯ ಜೀವನದ ಜೀವರಕ್ಷಕ ಸಾಧನ ನೀರು. ನೀರೇ ಜೀವನ ಎಂಬುದಾಗಿ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಹಾಗಾಗಿ ಜೀವ ಸಂಜೀವಿನಿಯನ್ನು ಉಳಿಸಲು ಸರ್ವರೂ ಒಂದಾಗೂಡಬೇಕಿದೆ. ಜೀವಾಮೃತವಾದ ನದಿಯ ನೀರನ್ನು ಅದರ ಸಹಜಸ್ಥಿತಿಯನ್ನು ವಿಕೃತಗೊಳಿಸಿ ಸಮಗ್ರ ಕರಾವಳಿ ಜಿಲ್ಲೆಯ ಬದುಕಿಗೆ ಕಂಠಕಪ್ರಾಯವಾದ ಯೋಜನೆಯನ್ನು ವಿರೋಧಿಸುವುದು ಅತ್ಯವಶ್ಯಕ ಎಂದು ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ನೇತ್ರಾವತಿ ನದಿಯನ್ನು ತಿರುಗಿಸುವ ಯೋಜನೆ ವಿರೋಧಿಸಿ ನಡೆಯುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಗೆ ಶನಿವಾರ ಸುಬ್ರಹ್ಮಣ್ಯ ದೇವಳದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕನ್ಯಾನ ಮಠದ ಶ್ರೀಮಹಾಬಲ ಸ್ವಾಮೀಜಿ, ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ಎಸ್.ಅಂಗಾರ ಮಾತನಾಡಿದರು.

ದಿಲ್ಲಿಯ ಗಂಗಾ ಸೇವಾ ಸಮಿತಿಯ ಅಧ್ಯಕ್ಷ ಆನಂದ ಸ್ವರೂಪ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸುಳ್ಯ ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ, ಪದ್ಮನಾಭ ಕೊಠಾರಿ, ಪ್ರಭಾಕರ ಬಂಗೇರ, ರುಕ್ಮಯ್ಯ ಪೂಜಾರಿ, ಯೋಗೀಶ್ ಭಟ್, ನೇತ್ರಾವತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಸಂಜೀವ ಮಠಂದೂರ್, ಗೌರವಾಧ್ಯಕ್ಷ ಎಂ.ಬಿ.ಪುರಾಣಿಕ್, ಸಂಚಾಲಕ ಕೆ.ಮೋನಪ್ಪ ಭಂಡಾರಿ, ಗೋಪಾಲಕೃಷ್ಣ ಹೇರಳೆ, ಸಹಸಂಚಾಲಕ ದೇವದಾಸ ಶೆಟ್ಟಿ, ಎಂ.ಜಿ.ಹೆಗ್ಡೆ, ಅನ್ವರ್ ಮಾಣಿಪ್ಪಾಡಿ, ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಎಸ್.ಜಿ.ಮಯ್ಯ, ಅರುಣ್ ಕುಮಾರ್ ಪುತ್ತಿಲ, ಜಿಪಂ ಸದಸ್ಯರಾದ ಆಶಾ ತಿಮ್ಮಪ್ಪ, ಹರೀಶ್ ಕಂಜಿಪಿಲಿ, ಮನ್ಮಥ ಎಸ್.ಎನ್., ಪುಷ್ಪಾವತಿ ಬಾಳಿಲ, ಪ್ರಮೀಳಾ ಜನಾರ್ದನ್, ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಸುಶೀಲಾ, ಗ್ರಾಪಂ ಉಪಾಧ್ಯಕ್ಷ ದಿನೇಶ್ ಬಿ.ಎನ್., ಸದಸ್ಯರಾದ ರಾಜೇಶ್ ಎನ್.ಎಸ್., ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News