ವಿಪಕ್ಷ ಸದಸ್ಯರಿಂದ ಉಪವಿಭಾಗಾಧಿಕಾರಿಗೆ ದೂರು

Update: 2016-12-10 18:21 GMT

ಪುತ್ತೂರು, ಡಿ.10: ಕಿಲ್ಲೆ ಮೈದಾನದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆಗೆ ಸಂಬಂಧಿಸಿ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಸರಿಯಾಗಿ ದಾಖಲಿಸದೆ ತಿರುಚಲಾಗಿದೆ ಎಂದು ಆರೋಪಿಸಿ ಪುತ್ತೂರು ನಗರಸಭೆಯ 12 ಮಂದಿ ವಿಪಕ್ಷ ಬಿಜೆಪಿ ಸದಸ್ಯರು ಪುತ್ತೂರು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ. ಶುಕ್ರವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ವಾರದ ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೆ ನಡೆಸುವ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಈ ವೇಳೆ ವಾರದ ಸಂತೆಯನ್ನು ಮುಂದಿನ ದಿನಗಳಲ್ಲಿ ಪ್ರತಿ ಸೋಮವಾರ ಕಿಲ್ಲೆ ಮೈದಾನದಲ್ಲೇ ನಡೆಸಲು ಹಾಗೂ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂತೆ ನಡೆಸಲು ಅವಕಾಶ ನೀಡದಿರಲು ಬಹುಮತದಿಂದ ನಿರ್ಣಯಿಸಲಾಗಿದೆ. ಈ ಹಿಂದೆ ಆ.19ರಂದು ನಡೆದಿದ್ದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯವನ್ನು ಸರಿಯಾಗಿ ದಾಖಲಿಸದೆ ತಿರುಚಿ ದಾಖಲಿಸಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ನಗರಸಭೆೆಯ ಉಪಾಧ್ಯಕ್ಷ ವಿಶ್ವನಾಥ ಗೌಡ ನೇತೃತ್ವದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಭಂಡಾರಿ, ಸದಸ್ಯರಾದ ರಾಜೇಶ್ ಬನ್ನೂರು, ಜೀವಂಧರ್ ಜೈನ್, ರಾಮಣ್ಣ ಗೌಡ, ಸೋಮಪ್ಪ ಸಪಲ್ಯ, ಹರೀಶ್ ನಾಯ್ಕ್ಕಾ, ಚಾಲಚಂದ್ರ, ಚಂದ್ರಸಿಂಗ್, ಸುಜೀಂದ್ರ ಪ್ರಭು, ವನಿತಾ ಕೆ.ಟಿ, ಯಶೋಧಾ ಹರೀಶ್ ಅವರ ನಿಯೋಗ ದೂರು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News