ಗೂಡಂಗಡಿಯಿಂದ ನಗದು ಕಳವು
Update: 2016-12-10 23:52 IST
ಪುತ್ತೂರು, ಡಿ.10: ಪುತ್ತೂರು ನಗರದ ಹೊರವಲಯದ ದರ್ಬೆ ಬೈಪಾಸ್ ಬಳಿಯಿರುವ ಗೂಡಂಗಡಿಯೊಂದರ ಹಿಂಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಇನ್ನಿತರ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ದರ್ಬೆ ಅಶ್ವಿನಿ ಸರ್ಕಲ್ ಬಳಿಯಿರುವ ದುಗ್ಗಮ್ಮ ದೇರಣ್ಣ ಸಭಾಭವನದ ಪಕ್ಕದಲ್ಲಿರುವ ಪೂವಪ್ಪಪುರುಷರಕಟ್ಟೆ ಎಂಬವರಿಗೆ ಸೇರಿದ ಗೂಡಂಗಡಿಯಿಂದ ಕಳ್ಳತನ ನಡೆದಿದೆ.
ರಾತ್ರಿ ಗೂಡಂಗಡಿಯ ಹಿಂಬಾಗಿಲು ಮುರಿದ ಒಳನುಗ್ಗಿದ ಕಳ್ಳರು ಅಂಗಡಿಯ ಒಳಗಿದ್ದ ಎರಡು ಡ್ರಾಯರ್‌ಗಳನ್ನು ಒಡೆದು ಅದರಲ್ಲಿದ್ದ 7,000 ರೂ. ನಗದು, 30 ಪ್ಯಾಕೇಟ್ ಸಿಗರೇಟು, ಒಂದು ಬಂಡಲ್ ಬೀಡಿಯನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಇದೇ ಗೂಡಂಗಡಿಯಿಂದ ಒಂದೂವರೆ ವರ್ಷದ ಹಿಂದೆ ಮೂರು ಗ್ಯಾಸ್ ಸಿಲಿಂಡರ್ ಕಳವಾಗಿತ್ತು. ಅದಾದ ಬಳಿಕ ಮತ್ತೆರಡು ಬಾರಿ ಚಿಲ್ಲರೆ ಸಾಮಗ್ರಿಗಳ ಕಳ್ಳತನ ನಡೆದಿತ್ತು ಎಂದು ತಿಳಿದು ಬಂದಿದೆ.