×
Ad

ಇಸ್ಲಾಮಾಬಾದ್: ಹಿಂದೂ ದೇಗುಲಕೆ್ಕ ನಿವೇಶನ ಮಂಜೂರು

Update: 2016-12-10 23:58 IST

 ಇಸ್ಲಾಮಾಬಾದ್,ಡಿ.10: ದೇವಾಲಯ, ಸಮುದಾಯ ಕೇಂದ್ರ ಹಾಗೂ ಸ್ಮಶಾನ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂಬ ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನೆಲೆಸಿರುವ ಹಿಂದೂಗಳ ಬಹುಕಾಲದ ಬೇಡಿಕೆ ಈಗ ಈಡೇರಿದೆ.
  ಇಸ್ಲಾಮಾಬಾದ್‌ನ ಸೆಕ್ಟರ್ ಎಚ್-9ನಲ್ಲಿರುವ ಅರ್ಧ ಎಕರೆ ನಿವೇಶನದಲ್ಲಿ ಹಿಂದೂ ದೇಗುಲ, ಸಮುದಾಯ ಕೇಂದ್ರ ಹಾಗೂ ಸ್ಮಶಾನಕ್ಕಾಗಿ ಅರ್ಧ ಎಕರೆ ನಿವೇಶನವನ್ನು ಮಂಜೂರು ಮಾಡಲು ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಅನುಮೋದನೆ ನೀಡಿದೆಯೆಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಶನಿವಾರ ವರದಿ ಮಾಡಿದೆ.
ಇಸ್ಲಾಮಾಬಾದ್‌ನ ಅಭಿವೃದ್ಧಿ ಹಾಗೂ ನಾಗರಿಕ ಸೌಲಭ್ಯಗಳ ನಿರ್ವಹಣೆಯ ಹೊಣೆಗಾರಿಕೆ ಹೊಂದಿರುವ ಸಿಡಿಎ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News